ವೀರಾಜಪೇಟೆ, ನ. 6: ಕೊರೊನಾ ವೈರಸ್ ನಿರ್ಬಂಧದಿಂದ 220 ದಿನಗಳಿಂದ ತತ್ತರಿಸಿ ಹೋಗಿದ್ದ ಖಾಸಗಿ ಬಸ್‍ಗಳಲ್ಲಿ 25 ಬಸ್‍ಗಳು ಮಾತ್ರ ಸಂಚರಿಸುತ್ತಿದ್ದು, ಮಾಲೀಕರಿಗೆ ಆದಾಯವೂ ಇಲ್ಲದೆ ಕಾರ್ಮಿಕರುಗಳಿಗೆ ಸೂಕ್ತ ವೇತನವಿಲ್ಲದೆ ತ್ರಿಶಂಕು ಸ್ವರ್ಗವನ್ನು ಅನುಭವಿಸುವಂತಾಗಿದೆ.
ಕೊಡಗಿನ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಕೊರೊನಾದ ಜೀವಭಯದ ಆತಂಕ ಇನ್ನು ಮುಂದುವರೆದಿದ್ದು, ಗ್ರಾಮಸ್ಥರು ತಾಲೂಕಿನ ಪ್ರಮುಖ ಪಟ್ಟಣಗಳಿಗೆ ಬಸ್ ಸೌಕರ್ಯವಿದ್ದರೂ ಪಟ್ಟಣಕ್ಕೆ ಬರಲು ಹೆದರುತ್ತಿದ್ದಾರೆ. ಕೇವಲ ಆಯ್ದ ಕೆಲವು ಖಾಸಗಿ ಬಸ್‍ಗಳು ಸಂಚರಿಸಿದರೂ ಪ್ರಯಾಣಿಕರಿಲ್ಲದೆ ಖಾಸಗಿ ಬಸ್‍ಗಳ ಸಂಚಾರಕ್ಕೂ ಧಕ್ಕೆ ಉಂಟಾಗಿದೆ. ಖಾಸಗಿ ಬಸ್‍ಗಳೆಲ್ಲ ಖಾಲಿ ಖಾಲಿ ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಕೊರೊನಾ ವೈರಸ್‍ನ ಮುಂಚಿತವಾಗಿ ಪ್ರತಿ ದಿನ ಖಾಸಗಿ ಬಸ್‍ಗಳು ಸುಮಾರು 108 ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಕೊರೊನಾ ನಿರ್ಬಂಧದ ಹಿನ್ನೆಲೆ ಎಲ್ಲ ಮಾರ್ಗಗಳ ಬಸ್‍ಗಳು ಸಂಚರಿಸದೆ ಆರು ತಿಂಗಳುಗಳಿಂದ ಸ್ಥಗಿತಗೊಂಡಿದ್ದವು. ಬಸ್ ಕಾರ್ಮಿಕರು ನಿರಂತರ ಬಂದ್‍ನಿಂದಾಗಿ ಕೆಲಸವಿಲ್ಲದೆ ಅಲೆಯುವಂತಾಗಿತ್ತು. ಕೇಂದ್ರ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ಖಾಸಗಿ ಬಸ್‍ಗಳಿಗೆ ಸಾಲ ಪಡೆದ ಮಾಲೀಕರಂತು ಕಂತುಗಳನ್ನು ಕಟ್ಟಲಾಗದೆ ಕಂಗಾಲಾಗಿದ್ದು ಬ್ಯಾಂಕ್‍ಗಳು ಕೇಂದ್ರ ಸರಕಾರದ ಆದೇಶದಂತೆ ಸಾಲದ ಕಂತುಗಳಿಗೆ ಮೂರು ತಿಂಗಳ ಸಮಯಾವಕಾಶವನ್ನು ಮುಂದೂಡಿದರೂ ಸುಮಾರು ಆರು ತಿಂಗಳವರೆಗೆ ಸಂಚಾರ ಸ್ಥಗಿತಗೊಂಡುದರಿಂದ ಬಸ್‍ಗಳ ಮಾಲೀಕರಿಗೆ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಮಧ್ಯೆ ಕೊರೊನಾದ ಮುಂಚೆ ಡೀಸೆಲ್ ಪ್ರತಿ ಲೀಟರ್‍ಗೆ ರೂ. 64 ಇದ್ದದ್ದು ಈಗ ರೂ. 77-86 ಪರಿಷ್ಕøತಗೊಂಡಿದ್ದು ಖಾಸಗಿ ಬಸ್‍ಗಳ ಸಂಚಾರಕ್ಕೆ ಮತ್ತಷ್ಟು ಹೊಡೆತ ಬಿದ್ದಂತಾಗಿದೆ.
ಈಗ ಸಂಚರಿಸುತ್ತಿರುವ 25 ಖಾಸಗಿ ಬಸ್ ಮಾರ್ಗಗಳಲ್ಲಿ ಕೇವಲ 60 ರಿಂದ 70 ಮಂದಿ ಕೆಲಸ ನಿರ್ವಹಿಸುತ್ತಿದ್ದು, ಬಸ್‍ಗಳು ಸಂಚರಿಸುತ್ತಿರುವ ಆದಾಯ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ. ಖಾಸಗಿ ಬಸ್ ಮಾರ್ಗಗಳು ನಷ್ಟದ ಹಾದಿಯಲ್ಲಿ ಮುಂದುವರೆಯುತ್ತಿರುವುದರಿಂದ ಬಸ್ ಮಾಲೀಕರಿಗೆ ಮೂರು ತಿಂಗಳಿಗೊಮ್ಮೆ ತೆರಿಗೆ ಕಟ್ಟುವುದು, ಬ್ಯಾಂಕ್ ಸಾಲದ ಕಂತುಗಳ ಮರುಪಾವತಿಯೂ ಕಷ್ಟ ಸಾಧ್ಯವಾಗುತ್ತಿದೆ ಎಂದು ದೂರುತ್ತಿದ್ದಾರೆ.
ಖಾಸಗಿ ಬಸ್ ಕಾರ್ಮಿಕರ ಸಂಘಟನೆ ಕಾರ್ಯದರ್ಶಿ ಟಿ.ಎಂ. ಮಂಜುನಾಥ್ ಮಾತನಾಡಿ, ಇನ್ನು ಖಾಸಗಿ ಬಸ್ ಸಂಚಾರ ಉದ್ಯಮ ಚೇತರಿಸಿಕೊಳ್ಳಬೇಕಾದರೆ ಇನ್ನು ಮೂರರಿಂದ ಐದು ತಿಂಗಳು ಬೇಕಾಗಬಹುದು. ಖಾಸಗಿ ಬಸ್‍ಗಳ ಸುಗಮ ಸಂಚಾರವಿಲ್ಲದೆ, ಕೊರೊನಾ ವೈರಸ್‍ನಿಂದ ಆತಂಕಕ್ಕೀಡಾಗಿರುವ ಗ್ರಾಮಸ್ಥರು ಸುಧಾರಿಸಿಕೊಂಡು ಹಿಂದಿನಂತೆಯೇ ಹೊರ ಬರಬೇಕಾದರೆ ಇನ್ನು ಅನೇಕ ತಿಂಗಳು ಬೇಕಾಗಲಿವೆ. ಖಾಸಗಿ ಬಸ್‍ಗಳ ಸೌಕರ್ಯವಿಲ್ಲದೆ ವೀರಾಜಪೇಟೆ ತಾಲೂಕಿನಾದ್ಯಂತ ಎಲ್ಲಿಯೂ ವ್ಯವಸ್ಥಿತವಾಗಿ ಸಂತೆಗಳು ನಡೆಯುತ್ತಿಲ್ಲ. ಕೊರೊನಾ ವೈರಸ್‍ನ ಭಯದಿಂದ ಜನರು ದೂರವಾದರೆ ಮಾತ್ರ ಸದ್ಯದಲ್ಲಿಯೇ ಖಾಸಗಿ ಬಸ್‍ಗಳ ಮುಕ್ತ ಸಂಚಾರ ನಡೆಯಲಿದೆ.
- ಎನ್. ದಿನೇಶ್ ನಾಯರ್,ವೀಡಿಯೋ ಮೂಲಕ ಛದ್ಮವೇಷ ಸ್ಪರ್ಧೆ
ಮಡಿಕೇರಿ, ನ. 6: ಗುರುಕುಲ ಕಲಾ ಪ್ರತಿಷ್ಠಾನದ ಜಿಲ್ಲಾ ಘಟಕದ ವತಿಯಿಂದ 5 ರಿಂದ 10 ವಯಸ್ಸಿನ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಛದ್ಮವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ತಮ್ಮ ಆಯ್ಕೆಯ ವಚನಕಾರರ ಛದ್ಮವೇಷದಲ್ಲಿ ಅವರ ರಚನೆಯ ವಚನ ಹೇಳಬೇಕು. ವೀಡಿಯೋಗಳು 2 ನಿಮಿಷಗಳು ಮೀರದಂತೆ ಇರಬೇಕು. ಮಕ್ಕಳು ತಮ್ಮ ಹೆಸರು ಹಾಗೂ ಅನುಕರಣೆ ಮಾಡಿರುವ ವಚನಕಾರರ ಹೆಸರನ್ನು ಹೇಳಬೇಕು.
ವೀಡಿಯೋವನ್ನು ತಾ. 7 ರಿಂದ 9 ರವರೆಗೆ ಕಳುಹಿಸಬೇಕು. ವೀಡಿಯೋ ಕಳುಹಿಸಬೇಕಾದ ಸಂಖ್ಯೆ - 9845497448 ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ.