ಮಡಿಕೇರಿ, ನ. 6: ಮಹಾರಾಷ್ಟ್ರ ಸರಕಾರದ ಪ್ರಜಾಪ್ರಭುತ್ವದ ಕಗ್ಗೊಲೆ ಹಾಗು ಪತ್ರಿಕಾ ರಂಗದ ಮೇಲಿನ ಸವಾರಿಯನ್ನು ಮಡಿಕೇರಿ ಬಿಜೆಪಿ ಯುವ ಮೋರ್ಚಾ ಖಂಡಿಸಿದೆ. ಈ ಬಗ್ಗೆ ಕೇಂದ್ರ ಗೃಹಮಂತ್ರಿಗಳಿಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅವರ ಮೂಲಕ ಸಲ್ಲಿಸಲಾಯಿತು.

ಮಹಾರಾಷ್ಟ್ರದ ಅಪವಿತ್ರ ಮೈತ್ರಿ ಸರ್ಕಾರವನ್ನು ವಜಾಗೊಳಿಸಿ , ಅರ್ನಬ್ ಗೋಸ್ವಾಮಿ ಅವರನ್ನು ಬಿಡುಗಡೆ ಮಾಡಿ ಮಹಾರಾಷ್ಟ್ರದಲ್ಲಿ ಜನಸಾಮಾನ್ಯರ ಬೆಂಬಲಿತ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ಮಡಿಕೇರಿ ಗ್ರಾಮಾಂತರ ಯುವ ಮೋರ್ಚಾದ ಅಧ್ಯಕ್ಷ ಹೇಮಂತ್ ತೋರೆರ, ಪ್ರಧಾನ ಕಾರ್ಯದರ್ಶಿ ಮಹೇಶ್ ಮೂಲೆಮಜಲು, ಉಪಾಧ್ಯಕ್ಷ ನಿತಿನ್ ಚಳಿಯಂಡ, ಸಂಚಾಲಕ ವಿನೋದ್ ಚೆದ್ಕಾರ್, ಅಕ್ಷಿತ್ ಉಳುವಾರನ, ಸುಧಿ ಅಪ್ಪಯ್ಯ, ಪವನ್ ತೋಟಂಬೈಲ್, ಚೇತನ್ ನೇಮಿರಾಜ್, ಹೇಮಂತ್ ಮುಕ್ಕಾಟಿ, ಪ್ರವೀಣ್ ಮಜಕೋಡಿ, ಜೀವನ್ ಬೆಳ್ಳಿಯಪ್ಪ ಮಞಂಡ್ರ ಹಾಜರಿದ್ದರು.