ಕೂಡಿಗೆ, ನ. 5: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ 250 ಕುಟುಂಬದ ಸದಸ್ಯರುಗಳಿಗೆ ಕೊರೊನಾ ತಪಾಸಣಾ ಪರೀಕ್ಷೆ ಪ್ರಾರಂಭವಾಗಿದೆ.

ಈ ಕೇಂದ್ರದಲ್ಲಿ ಇಲ್ಲಿನ ಜನರಿಗೆ ಮಂಗಳವಾರ ರಜೆ ದಿನವಾಗಿ ಇರುವುದರಿಂದ ಎಲ್ಲರೂ ಸಾಮೂಹಿಕವಾಗಿ ತಪಾಸಣೆಯಲ್ಲಿ ಭಾಗವಹಿಸಿದರು. ತಪಾಸಣೆ ಕರ್ತವ್ಯವನ್ನು ಕೂಡಿಗೆ ವಲಯದ ಆರೋಗ್ಯ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗದವರು ನೆರವೇರಿಸಿದರು.