ಕೂಡಿಗೆ, ನ. 5: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಭಾರೀ ಬಿಗಿಭದ್ರತೆ ಒದಗಿಸಲಾಗಿದೆ. ಅಣೆಕಟ್ಟೆಯ ಭದ್ರತೆಯ ಹಿತದೃಷ್ಟಿಯಿಂದ 21 ಸಂಖ್ಯೆಯ ವಿವಿಧ ದರ್ಜೆಯ ಪೆÇಲೀಸ್ ಸಿಬ್ಬಂದಿಗಳು ಮತ್ತು ಒಬ್ಬರು ವೃತ್ತ ನಿರೀಕ್ಷಕರನ್ನು ನಿಯೋಜಿಸಲಾಗಿದೆ. ಅಣೆಕಟ್ಟೆ ಪ್ರವೇಶಕ್ಕೆ ಸಂಬಂಧಿಸಿದವರ ಅನುಮತಿ ಬೇಕಾಗುತ್ತದೆ. ಮುಖ್ಯದ್ವಾರದಲ್ಲಿ ಹೋಗುವ ವ್ಯಕ್ತಿಯ ಸಂಪೂರ್ಣ ತಪಾಸಣೆ ನಡೆಯುತ್ತಿದೆ.ಅಣೆಕಟ್ಟೆಯ ನಾಲ್ಕು ಭಾಗದಲ್ಲಿ ಕಟ್ಟುನಿಟ್ಟಿನ ಕೇಂದ್ರಗಳನ್ನು ನಿರ್ಮಾಣ ಮಾಡಿಕೊಂಡು ನಿಯೋಜಿತ ಪೆÇಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಎಸ್‍ಐಎಸ್‍ಎಫ್ ಅನುಮತಿ ಇಲ್ಲದೆ ಅಣೆಕಟ್ಟೆಯ ಮೇಲ್ಭಾಗಕ್ಕೆ ಪ್ರವೇಶ ಇಲ್ಲದಾಗಿದೆ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಸಹ ತಪಾಸಣೆ ಮಾಡಿ ಕೆಲಸ ಮಾಡಲು ಬಿಡುತ್ತಿದ್ದಾರೆ. ಅಣೆಕಟ್ಟೆಯ ಎಡಭಾಗ ಮತ್ತು ಬಲ ಭಾಗಗಳಲ್ಲಿ ಯಾರೂ ಒಳಪ್ರವೇಶ ಮಾಡದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಪೆÇಲೀಸ್ ಇಲಾಖೆಯವರು ಕೈಗೊಂಡಿದ್ದಾರೆ. ಅಣೆಕಟ್ಟೆಯ ಸಂಪೂರ್ಣ ಭದ್ರತೆಯು ಕೆಎಸ್‍ಐಎಸ್‍ಎಫ್‍ನ ಹಿಡಿತದಲ್ಲಿದೆ. ಅಣೆಕಟ್ಟೆಯ ಸುತ್ತಲೂ ಸಿಸಿ ಟಿವಿ ಸೇರಿದಂತೆ ಸೂಕ್ಷ್ಮ್ಮ ವ್ಯವಸ್ಥೆಯನ್ನು ಮಾಡಿ ಭದ್ರತೆಯ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತಿದೆ. -ಕೆ.ಕೆ.ಎನ್. ಶೆಟ್ಟಿ