ಮಡಿಕೇರಿ, ನ. 5 : 1939ರಲ್ಲಿ ಸ್ಥಾಪನೆಯಾದ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ 2020-25ನೇ ಸಾಲಿನ ಆಡಳಿತ ಮಂಡಳಿಗೆ ತಾ. 7 ರಂದು ಮಡಿಕೇರಿಯ ಕೊಡವ ಸಮಾಜದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 17 ಸ್ಥಾನಗಳನ್ನು ಹೊಂದಿರುವ ಸಂಘಕ್ಕೆ ಈಗಾಗಲೇ 6 ಮಂದಿ ಅವಿರೋಧ ಆಯ್ಕೆ ಯಾಗಿದ್ದಾರೆ. ವೀರಾಜಪೇಟೆ ತಾಲೂಕಿನಿಂದ ಸಾಮಾ£್ಯÀ ಪುರುಷ ಅಭ್ಯರ್ಥಿಗಳಾದ ಎಸ್.ಎಸ್. ಸುರೇಶ್, ಪೆಮ್ಮಂಡ ಟಿ. ಬೋಪಣ್ಣ, ಕೋಣಿಯಂಡ ಡಿ. ಬೋಪಣ್ಣ, ಸೋಮವಾರಪೇಟೆ ತಾಲೂಕಿನಿಂದ ಜಿಲ್ಲಾವಾರು (ಮೊದಲ ಪುಟದಿಂದ) ಹಿಂದುಳಿದ ಪ್ರವರ್ಗ ಬಿ ಅಭ್ಯರ್ಥಿ ಪೇರಿಯನ ಉದಯ ಕುಮಾರ್, ಮಡಿಕೇರಿ ತಾಲೂಕಿನಿಂದ ಹಾಲಿ ನಿರ್ದೇಶಕ ಹಿಂದುಳಿದ ಪ್ರವರ್ಗ ಎ ಅಭ್ಯರ್ಥಿ ಬಿ.ಸಿ. ಚೆನ್ನಪ್ಪ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ವರ್ಗದ ಜಿಲ್ಲಾವಾರು ಅಭ್ಯರ್ಥಿ ಕುಡಿಯರ ಬೆಳ್ಯಪ್ಪ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶನಿವಾರದಂದು ಇನ್ನುಳಿದ ಒಟ್ಟು 11 ಸ್ಥಾನಗಳಿಗೆ ಚುನಾವಣೆ ಏರ್ಪಟ್ಟಿದೆ. ಬೆ. 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಮಡಿಕೇರಿ ತಾಲೂಕಿನಿಂದ 5 ಸಾಮಾನ್ಯ ಪುರುಷ ಸ್ಥಾನಗಳಿದ್ದು ಸೋಮವಾರಪೇಟೆ ತಾಲೂಕಿನಿಂದ 3 ಸಾಮಾನ್ಯ ಪುರುಷ ಸ್ಥಾನಗಳಿವೆ. ಅಲ್ಲದೆ ಜಿಲ್ಲಾ ಮಟ್ಟದಲ್ಲಿ 2 ಮಹಿಳಾ ಸ್ಥಾನಗಳಿವೆ. 1 ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಸ್ಥಾನವಿದ್ದು- ಈ 11 ಸ್ಥಾನಗಳಿಗೆ ಮತದಾನದ ಮೂಲಕ ಚುನಾವಣೆ ನಡೆದು ಆಯ್ಕೆಯಾಗಬೇಕಿದೆ.

ಏಲಕ್ಕಿ ಮಾರಾಟ ಸಹಕಾರ ಸಂಘದಲ್ಲಿ ಮೂರು ತಾಲೂಕಿನ ಒಟ್ಟು 2,708 ಸದಸ್ಯರಿದ್ದು, ಅರ್ಹ ಮತದಾರರು 496, ಅನರ್ಹರು, ಅಪೂರ್ಣ ಶೇರುದಾರರು ಹಾಗೂ ಸುಸ್ತಿದಾರರು 2,212 ಆಗಿದ್ದಾರೆ.