ಮಡಿಕೇರಿ, ನ. 5: ಐಚೆಟ್ಟಿರ ಮಾ. ಮುತ್ತಣ್ಣ ಹಾಗೂ ಬಾಚಮಾಡ ಗಣಪತಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ತಾ. 22 ರಂದು ನಡೆಸಲು ಉದ್ದೇಶಿಸಿದ್ದ ಸಾಹಿತ್ಯ ನಮ್ಮೆಯನ್ನು ಸರಕಾರದ ಕೋವಿಡ್-19 ನೀತಿಸಂಹಿತೆಯ ಕಾರಣದಿಂದ ಮುಂದೂಡಲಾಗಿದೆ.

ಶತಮಾನೋತ್ಸವದ ಪ್ರಯುಕ್ತ ಕೊಡವಾಮೆರ ಕೊಂಡಾಟ ಕೂಟವು ತಿಂಗಳಿಗೊಂದು ಅಂತರ್ಜಾಲ ಸ್ಪರ್ಧೆಯ ಮೂಲಕ ಸಾಹಿತ್ಯ ಜಾಗೃತಿಯನ್ನು ನಡೆಸಿದ್ದು, ಅಂತಿಮವಾಗಿ ವೀರಾಜಪೇಟೆಯಲ್ಲಿ ಐಚೆಟ್ಟಿರ ಹಾಗೂ ಬಾಚಮಾಡ ಕುಟುಂಬಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸರಕಾರವು ಸಾರ್ವಜನಿಕ ಸಮಾರಂಭಗಳಲ್ಲಿ ಜನ ಸೇರುವುದಕ್ಕೆ ಕೆಲ ನಿರ್ಬಂಧ ವಿಧಿಸಿರುವುದರಿಂದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಕೊಡವಾಮೆರ ಕೊಂಡಾಟದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.