ಮಡಿಕೇರಿ, ನ. 4: ಮಂಗಳೂರು ವಿಶ್ವವಿದ್ಯಾಲಯವು ಕೊಡಗು ವಿಭಾಗದ ಮೌಲ್ಯಮಾಪನ ಕೇಂದ್ರವನ್ನು ಜಿಲ್ಲೆಯಲ್ಲೆ ಸ್ಥಾಪಿಸಿದ್ದು, ಇದು ಈ ವರ್ಷಕ್ಕೆ ಸೀಮಿತವಾಗದೆ ಪ್ರತಿ ವರ್ಷವೂ ಇಲ್ಲೇ ಮೌಲ್ಯಮಾಪನ ನಡೆಸುವಂತೆ ತೀರ್ಮಾನಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ಎಸ್. ಯಡಪಡಿತ್ತಾಯ ಹೇಳಿದರು. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿಶ್ವವಿದ್ಯಾಲಯದ ಪದವಿ ಮೌಲ್ಯಮಾಪನಕ್ಕೆ ಎಫ್.ಎಮ್.ಕೆ.ಎಮ್.ಸಿ ಕಾಲೇಜಿನಲ್ಲಿ ಅವಕಾಶ ದೊರೆತಿದ್ದು, ಈ ಕುರಿತು ಪರಿಶೀಲನೆಗೆ ಕಾಲೇಜಿಗೆ ಆಗಮಿಸಿದ್ದ ಉಪ ಕುಲಪತಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತಾವು ಪರೀಕ್ಷಾಂಗ ಕುಲಸಚಿವ ಆಗಿದ್ದ ಕಾಲದಿಂದ ಕೊಡಗಿನಲ್ಲಿ ಮೌಲ್ಯಮಾಪನ ಕೇಂದ್ರದ ಸ್ಥಾಪನೆಗೆ ಬೇಡಿಕೆ, ಒತ್ತಾಯಗಳಿದ್ದು ಹಲವು ವರ್ಷಗಳ ನಂತರ ಕಾರ್ಯಗತವಾಗಿದೆ. ಜಿಲ್ಲೆಯಲ್ಲಿ ಮೌಲ್ಯಮಾಪನ ಕೇಂದ್ರವನ್ನು ಈ ವರ್ಷ ಕೋವಿಡ್-19 ಮುಂಜಾಗ್ರತೆ ಸಂಬಂಧ ವಿಶೇಷ ನೆಲೆಯಲ್ಲಿ ಸ್ಥಾಪಿಸಿದ್ದಲ್ಲ; ಭವಿಷ್ಯದಲ್ಲಿ ಪ್ರತೀ ವರ್ಷ ಇಲ್ಲಿಯೇ ಮೌಲ್ಯಮಾಪನ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಡಿಜಿಟಲ್ ಮೌಲ್ಯಮಾಪನಕ್ಕೆ ಚಿಂತನೆ

ಪ್ರಸ್ತುತ ಡಿಜಿಟಲ್ ರಹಿತ ಮೌಲ್ಯಮಾಪನ ಕ್ರಮ ಪಾಲಿಸುತ್ತಿದ್ದು ಮುಂಬರುವ ದಿನಗಳಲ್ಲಿ ಡಿಜಿಟಲ್ ಮೌಲ್ಯಮಾಪನೆಯ ಕ್ರಮ ಪಾಲಿಸುವ ಚಿಂತನೆಯಲ್ಲಿದ್ದು ಕಾರ್ಯಗತಗೊಳ್ಳಲಿದೆ ಎಂದು ಯಡಪಡಿತ್ತಾಯ ನುಡಿದರು. ಈ ಕ್ರಮ ಬಳಸಿದ್ದಲ್ಲಿ 48 ಗಂಟೆಗಳಲ್ಲಿ ಫಲಿತಾಂಶ ದೊರೆಯಲಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ - 2020 ಅನುಷ್ಠಾನಗೊಳಿಸಲು ಸಂಕಲ್ಪ

ಕೇಂದ್ರ ಸರಕಾರ ಇತ್ತೀಚೆಗೆ ಬಿಡುಗಡೆಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಪ್ರಥಮವಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅನುಷ್ಠಾನಗೊಳಿಸುವಂತೆ ಸಂಕಲ್ಪ ಮಾಡಲಾಗಿದೆ. ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ತನಾರಾಯಣ

ಬೇಡಿಕೆ, ಒತ್ತಾಯಗಳಿದ್ದು ಹಲವು ವರ್ಷಗಳ ನಂತರ ಕಾರ್ಯಗತವಾಗಿದೆ. ಜಿಲ್ಲೆಯಲ್ಲಿ ಮೌಲ್ಯಮಾಪನ ಕೇಂದ್ರವನ್ನು ಈ ವರ್ಷ ಕೋವಿಡ್-19 ಮುಂಜಾಗ್ರತೆ ಸಂಬಂಧ ವಿಶೇಷ ನೆಲೆಯಲ್ಲಿ ಸ್ಥಾಪಿಸಿದ್ದಲ್ಲ; ಭವಿಷ್ಯದಲ್ಲಿ ಪ್ರತೀ ವರ್ಷ ಇಲ್ಲಿಯೇ ಮೌಲ್ಯಮಾಪನ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಡಿಜಿಟಲ್ ಮೌಲ್ಯಮಾಪನಕ್ಕೆ ಚಿಂತನೆ

ಪ್ರಸ್ತುತ ಡಿಜಿಟಲ್ ರಹಿತ ಮೌಲ್ಯಮಾಪನ ಕ್ರಮ ಪಾಲಿಸುತ್ತಿದ್ದು ಮುಂಬರುವ ದಿನಗಳಲ್ಲಿ ಡಿಜಿಟಲ್ ಮೌಲ್ಯಮಾಪನೆಯ ಕ್ರಮ ಪಾಲಿಸುವ ಚಿಂತನೆಯಲ್ಲಿದ್ದು ಕಾರ್ಯಗತಗೊಳ್ಳಲಿದೆ ಎಂದು ಯಡಪಡಿತ್ತಾಯ ನುಡಿದರು. ಈ ಕ್ರಮ ಬಳಸಿದ್ದಲ್ಲಿ 48 ಗಂಟೆಗಳಲ್ಲಿ ಫಲಿತಾಂಶ ದೊರೆಯಲಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ - 2020 ಅನುಷ್ಠಾನಗೊಳಿಸಲು ಸಂಕಲ್ಪ

ಕೇಂದ್ರ ಸರಕಾರ ಇತ್ತೀಚೆಗೆ ಬಿಡುಗಡೆಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಪ್ರಥಮವಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅನುಷ್ಠಾನಗೊಳಿಸುವಂತೆ ಸಂಕಲ್ಪ ಮಾಡಲಾಗಿದೆ. ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ತನಾರಾಯಣ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಕೊಡವ ಭಾಷೆ ವ್ಯಾಸಂಗಕ್ಕೆ ಅವಕಾಶ

ಕೊಡವ ಭಾಷೆಯನ್ನು ಶೀಘ್ರದಲ್ಲಿಯೇ ‘ಪಿ.ಜಿ ಡಿಪ್ಲೋಮಾ ಇನ್ ಕೊಡವ ಲ್ಯಾಂಗ್‍ವೇಜ್ ಆ್ಯಂಡ್ ಕಲ್‍ಚರ್’ ಕೋರ್ಸ್‍ನಡಿ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಾಡಬಹುದಾಗಿದೆ. ಈ ಕೋರ್ಸ್ ಅನ್ನು ವ್ಯಾಸಂಗ ಮಾಡಲು ಸಿಂಡಿಕೇಟ್ ಅನುಮೋದನೆ ದೊರೆತಿದ್ದು ಈ ವರ್ಷವೇ ಪ್ರಾರಂಭಿಸಬಹುದಾಗಿದೆ. ಇದಕ್ಕೆ ಯಾವುದೇ ಅಡಚಣೆಗಳಿಲ್ಲ. ಕಲಾ ವಿಭಾಗ, ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗ ಅಥವಾ ಯಾವುದೇ ವಿಭಾಗದ ವಿದ್ಯಾರ್ಥಿಗಳು ಈ ಕೋರ್ಸ್ ಅನ್ನು ಹೆಚ್ಚುವರಿ ಕೋರ್ಸ್ ಆಗಿ ಅಭ್ಯಸಿಸಲು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಡಿಸೆಂಬರ್ ನಲ್ಲಿ ಕಾಲೇಜುಗಳ ಪುನರಾರಂಭ ಸಾಧ್ಯತೆ

ಕೋವಿಡ್-19 ನಿಂದಾಗಿ ಸದ್ಯದ ಮಟ್ಟಿಗೆ ಆನ್‍ಲೈನ್ ಮೂಲಕವೇ ಶಿಕ್ಷಣ ನಡೆಯುತ್ತಿದೆ. ನವೆಂಬರ್ 17 ರಿಂದ ಪದವಿ ಕಾಲೇಜುಗಳ ಪುನರಾರಂಭಕ್ಕೆ ಸರಕಾರ ಆದೇಶಿಸಿತ್ತು. ಆದರೆ ಇದೀಗ ಮತ್ತೆ ಅದನ್ನು ಮುಂದೂಡಿದ್ದು ಡಿಸೆಂಬರ್‍ನಿಂದ ಕಾಲೇಜುಗಳು ಪುನರಾರಂಭಗೊಳ್ಳಬಹುದು. ಸದ್ಯದ ಮಟ್ಟಿಗೆ ಆನ್‍ಲೈನ್ ತರಗತಿಗಳೇ ನಡೆಯುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಸೇರಿದಂತೆ ಉಪನ್ಯಾಸಕರು ಹಾಜರಿದ್ದರು.