ವೀರಾಜಪೇಟೆ, ನ. 4: ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ ನಿಯಮಿತ, ಇದರ ಆಡಳಿತ ಮಂಡಳಿ ನಿರ್ದೇಶಕರ ಒಟ್ಟು 15 ಸ್ಥಾನಗಳಿಗೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ತಾ. 7ರಂದು ನಿಗದಿಪಡಿಸಲಾಗಿದ್ದ ಚುನಾವಣೆ ಇರುವುದಿಲ್ಲವೆಂದು ಚುನಾವಣಾಧಿ ಕಾರಿ ಪಿ.ಬಿ. ಮೋಹನ್ ಕುಮಾರ್ ತಿಳಿಸಿದ್ದಾರೆ.