ಕಡಂಗ, ನ. 4: ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ. ಅವರ ಜನ್ಮದಿನದಿಂದ ಅನುಗ್ರಹಿತವಾದ ಈ ಪವಿತ್ರ ರಬೀಉಲ್ ಅವ್ವಲ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯ ಫೈಝೀಸ್ ವತಿಯಿಂದ ಎಮ್ಮೆಮಾಡುವಿನಲ್ಲಿ ರಬೀಹ್ ಕ್ಯಾಂಪೈನ್ ನಡೆಯಿತು.

ಮೌಲಿದ್ ಪಾರಾಯಣ ಹಾಗೂ ದುಆ ನೇತೃತ್ವವನ್ನು ನಿಝಾರ್ ಫೈಝಿ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವೈ.ಎಸ್. ಎಮ್ಮೆಮಾಡು ಶಾಖಾಧ್ಯಕ್ಷ ಇಬ್ರಾಹಿಂ ಹಾಜಿ ವಹಿಸಿದ್ದರು. ಉದ್ಘಾಟನೆಯನ್ನು ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಹೈಬ್ ಫೈಝಿ ಕೊಳಕೇರಿ ಮಾಡಿದರು. ಮುಖ್ಯ ಪ್ರಭಾಷಣವನ್ನು ಇಬಾದ್ ಕೊಡಗು ಜಿಲ್ಲಾ ಕಾರ್ಯದರ್ಶಿ ರಿಯಾಝ್ ಫೈಝಿ ಎಮ್ಮೆಮಾಡು ಮಾಡಿದರು. ಕಾರ್ಯಕ್ರಮದಲ್ಲಿ ಮಾಹಿನ್ ಹಾಜಿ ಎಮ್ಮೆಮಾಡು, ಉಮರ್ ಹಾಜಿ ಎಮ್ಮೆಮಾಡು, ಝುಬೈರ್ ಫೈಝಿ ಕೊಳಕೇರಿ, ಅಹ್ಮದ್ ಮುಸ್ಲಿಯಾರ್ ಎಮ್ಮೆಮಾಡು ಇನ್ನಿತರರು ಹಾಜರಿದ್ದರು. ಸ್ವಾಗತವನ್ನು ಶೌಕತ್ ಫೈಝಿ ಎಮ್ಮೆಮಾಡು ಕೋರಿದರೆ, ಮುಹಮ್ಮದ್ ಅಝ್ ಹರಿ ಎಮ್ಮೆಮಾಡು ವಂದಿಸಿದರು.