ವೀರಾಜಪೇಟೆ ವರದಿ, ನ. 4: ಅಮ್ಮತಿಯ ಪ್ರೌಢ ಶಾಲಾ ಮೈದಾನದಲ್ಲಿ ತಾ. 6 ರಿಂದ 8ರ ವರೆಗೆ 24 ವರ್ಷದೊಳಗಿನ ಕಾಲೇಜು ಯುವಕರಿಗೆ ಹಾಕಿ ಪಂದ್ಯಾವಳಿ ನಡೆಯಲಿದೆ. ಕೂರ್ಗ್ ಬಾಲೆಕಾರಡ ಬಳಗ ಅಯೋಜಿಸಿರುವ 5 ‘ಂ siಜe ಮಾದÀರಿಯ ಹಾಕಿ ಪಂದ್ಯಾವಳಿಯನ್ನು ಯುವಕರು ತಮ್ಮ ಉಳಿಕೆ ಹಣ ಹಾಗೂ ತಂದೆ-ತಾಯಿ ನೆಂಟರಿಷ್ಟರಿಂದ ಸಂಗ್ರಹಿಸಿ ನಡೆಸುತ್ತಿರುವುದು ವಿಶೇಷವಾಗಿದೆ.

ಬಳಗದ ಅಧ್ಯಕ್ಷ ಕಳಿಚಂಡ ಕೃಷಿಕ್ ಕುಶಾಲಪ್ಪ ಪಂದ್ಯಾಟದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ 35 ತಂಡಗಳು ನಾಕ್‍ಔಟ್ ಮಾದÀರಿಯ ಪಂದ್ಯಾಟದಲ್ಲಿ ಭಾಗವಹಿಸುತ್ತಿವೆ.

ಮೊದಲ ಸುತ್ತಿನ ಪಂದ್ಯಗಳು 7+2+7 ನಿಮಿಷ ಹಾಗೂ ಸೆಮಿಫೈನಲ್ ಹಾಗೂ ಪೈನಲ್ ಪಂದ್ಯ 10+5+10 ನಿಮಿಷಗಳ ಎರಡು ಅವಧಿಗೆ ನಡೆಯುತ್ತದೆ. ಆಙಇSನ ವಿದ್ಯಾಥಿಗಳಿಗೆ ಆಡಲು ಅವಕಾಶ ಇಲ್ಲ. ಹಾಕಿ ಕೂರ್ಗ್ ಸಂಸ್ಥೆಯವರು ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದರು.

ಕೊರೊನಾ ಕಾರಣದಿಂದ ಜನ ಜಂಗುಳಿ ಇಲ್ಲದಂತೆ ತಡೆಯುವುದಕ್ಕಾಗಿ ಕಡಿಮೆ ಅವಧಿಯ ಪಂದ್ಯ ಆಯೋಜಿಸಲಾಗಿದೆ.

ತಾ. 6 ರಂದು ಹಿರಿಯರಿಗೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕೊಣ್ಣನಕಟ್ಟೆ ಹಾಗೂ ಅಮ್ಮತ್ತಿ ತಂಡಗಳು ಮುಖಾಮುಖಿಯಾಗಲಿವೆ ಎಂದರು.

‘ಬಾಲೆಕಾರಡ ಬಳಗ’ ಈ ಮಟ್ಟದ ಪಂದ್ಯಾವಳಿ ಅಯೋಜಿಸಿರುವ ಕುರಿತು ಮಾತನಾಡಿದ ಕಾರ್ಯದರ್ಶಿ ಮಚ್ಚಮಾಡ ಶಶಾಂಕ್, ನಾವು ಸೇಹಿತರು ಕೊರೊನಾ ಸಂದರ್ಭದಲ್ಲಿ ಮೊಬೈಲ್‍ನೊಂದಿಗೆ ಸುಮನೆ ಕೂರುವುದು ತರವಲ್ಲ ಎಂದು ಯೋಚಿಸಿ ಪೆÇನ್ನಂಪೇಟೆ ಸುತ್ತ ಮುತ್ತ ಸ್ವಚ್ಛತಾ ಮಾಡಿ ಶಾಲೆಯ ವಠಾರದಲ್ಲಿ ಸಸಿಗಳನ್ನು ನೆಟ್ಟಿದ್ದೆವು.

ತಲಕಾವೇರಿಯನ್ನು ಸ್ವಚ್ಛತೆ ಮಾಡಲಾಗಿದೆ. ನಮ್ಮ ಬಳಗದ 17 ಸದಸ್ಯರು ಗೋಣಿಕೂಪ್ಪದಲ್ಲಿ ಪಿಯುಸಿ ವಿದ್ಯಾಭ್ಯಾಸ ಒಟ್ಟಿಗೆ ಮಾಡಿದವರು. ಎಲ್ಲಾ 19 ರಿಂದ 33 ವಯೋಮಿತಿಯವರಾಗಿದ್ದು, ಇದೀಗ ಈ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದರು. ಪಂದ್ಯಾಟ ವೀಕ್ಷಿಸಲು ಬರುವವರು ಸರಕಾರದ ಮಾರ್ಗಸೂಚಿಯಂತೆ ಬರಬೇಕು ಎಂಬ ಮನವಿ ನಮ್ಮದು ಎಂದರು.