ಕೂಡಿಗೆ, ನ. 4: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ವಿಭಾಗದ ಪೌತಿ, ವಾರಸಾ ಖಾತೆ ಆಂದೋಲನ ಕಾರ್ಯಕ್ರಮ ಕಂದಾಯ ಇಲಾಖೆಯ ಮೂಲಕ ಹೆಬ್ಬಾಲೆ ಸರಕಾರಿ ಶಾಲಾ ಆವರಣದಲ್ಲಿ ತಾ. 7 ರಂದು ನಡೆಯಲಿದೆ.

ರೈತರು ನಮೂನೆ- 1ರಲ್ಲಿ ಪೌತಿ ಖಾತೆ ಕುರಿತು ಅರ್ಜಿ, ಖಾತೆದಾರರು ಮೃತರಾಗಿದವರ ಸರ್ವೆ ನಂಬರ್ ಪಹಣೆ, ಮೃತರ ಸಮರ್ಥನೆ ಪತ್ರ, ವಂಶವೃಕ್ಷ, ಪಡಿತರ ಚೀಟಿ ಮತ್ತು ಆಧಾರ ಕಾರ್ಡ್ ಒದಗಿಸಬೇಕಾಗುತ್ತದೆ ಎಂದು ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಸಂತೋಷ್ ತಿಳಿಸಿದ್ದಾರೆ. ಹೆಬ್ಬಾಲೆಯಲ್ಲಿ ತಾ. 7 ರಂದು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೆಬ್ಬಾಲೆ ಗ್ರಾಮ ಲೆಕ್ಕಾಧಿಕಾರಿ ಸಚಿನ್ ತಿಳಿಸಿದ್ದಾರೆ.