ಕುಶಾಲನಗರ, ನ. 3: ವೇಶ್ಯಾವಾಟಿಕೆ ನಡೆಯುತ್ತಿದ್ದ ಹೋಂಸ್ಟೇ ಮೇಲೆ ದಾಳಿ ನಡೆಸಿದ ಕುಶಾಲನಗರ ಪೆÇಲೀಸರು ದಂಧೆಯಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರಿನಿಂದ ಮಹಿಳೆಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುಶಾಲನಗರದ ಮಾದಾಪಟ್ಟಣದ ಹೋಂಸ್ಟೇ ಮಾಲೀಕ ಹಾಗೂ ದಲ್ಲಾಳಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೆÇಲೀಸರು ಯಶಸ್ವಿಯಾಗಿದ್ದಾರೆ. ಕುಶಾಲನಗರದ ಗಂಧದಕೋಟೆ ಗ್ರಾಮದಲ್ಲಿರುವ ಕೂರ್ಗ್ ಹಾಲಿಡೇ ಹೋಂಸ್ಟೇಯ ಮಾಲೀಕ ಹಾಗೂ ಮತ್ತೊಬ್ಬ ವ್ಯಕ್ತಿ ಮೈಸೂರಿನಿಂದ ಮಹಿಳೆಯರನ್ನು ಹಣದ ಆಮಿಷವೊಡ್ಡಿ ತನ್ನ ಹೋಂಸ್ಟೇಗೆ ಕರೆಸಿ, ಸ್ಥಳೀಯ ವ್ಯಕ್ತಿಗಳನ್ನು ಮಹಿಳೆಯರೊಂದಿಗೆ ಲೈಂಗಿಕ ಚಟುವಟಿಕೆಗೆ ಬಿಟ್ಟು ಅವರಿಂದ ಹಣ ಪಡೆಯುತ್ತಿದ್ದ ಬಗ್ಗೆ ಕುಶಾಲನಗರ ವೃತ್ತ ನಿರೀಕ್ಷಕರ ತಂಡ ಮಾಹಿತಿ ಕಲೆಹಾಕಿತ್ತು. ಹೋಂಸ್ಟೇ ಮಾಲೀಕ ಹಾಗೂ ಮತ್ತೊಬ್ಬ ವ್ಯಕ್ತಿ ಮೈಸೂರಿನಿಂದ ಇಬ್ಬರು ಮಹಿಳೆಯರನ್ನು ಕರೆಸಿರುವುದನ್ನು ಖಚಿತ ಪಡಿಸಿಕೊಂಡು ಹೋಂಸ್ಟೇಯ ಮೇಲೆ ದಾಳಿ ಮಾಡಲಾಗಿ ಅಲ್ಲಿ ಮೈಸೂರು ವಿಜಯನಗರ ಮೂಲದ ಮಹಿಳೆ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮಹಿಳೆಯೊಂದಿಗೆ ಗುಡ್ಡೆಹೊಸೂರು ಗ್ರಾಮದ ಸ್ಥಳೀಯರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದ ಮೇರೆಗೆ ಅವರುಗಳ ವಿರುದ್ಧ ಕುಶಾಲನಗರ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೂರ್ಗ್ ಹಾಲಿಡೇ ಹೋಂಸ್ಟೇ ಮಾಲೀಕ ರಾಜೇಶ್ (36) ಗಂಧದಕೋಟೆ ಗ್ರಾಮ ಹಾಗೂ ಮದಲಾಪುರದ ರಜನಿಕಾಂತ್
ಎಸ್. ಆರ್. (34) ಎಂಬಿಬ್ಬರನ್ನು ಅನೈತಿಕ ಚಟುವಟಿಕೆ ತಡೆಕಾಯ್ದೆಯಡಿ ಬಂಧಿಸಲಾಗಿದೆ. ದಾಳಿ ವೇಳೆ ಸಿಕ್ಕ ಇಬ್ಬರು ಮಹಿಳೆಯರು ಹಾಗೂ ಗಿರಾಕಿಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ ಮಾರ್ಗದರ್ಶನದಲ್ಲಿ, ಪೆÇಲೀಸ್ ವೃತ್ತ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ಠಾಣಾಧಿಕಾರಿ ಗಣೇಶ್ ಮತ್ತು ವಿ. ಪ್ರಕಾಶ್, ರವೀಂದ್ರ, ಜಯಪ್ರಕಾಶ್, ಸಜಿ, ಸಂಪತ್ ರೈ, ಶ್ವೇತಾ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಾಹಿತಿ ನೀಡಲು ಕೋರಿಕೆ
ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಆರಂಭವಾ ದಾಗಿನಿಂದ
(ಮೊದಲ ಪುಟದಿಂದ) ಅನೇಕ ಪ್ರವಾಸಿಗರು ಮೋಜು, ಮಸ್ತಿ ನೆಪದಲ್ಲಿ ಕೊಡಗು ಜಿಲ್ಲೆಗೆ ಆಗಮಿಸುತ್ತಿರುವು ದನ್ನು ಕೊಡಗು ಜಿಲ್ಲಾ ಪೊಲೀಸ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಎಲ್ಲಾ ಹೋಂಸ್ಟೇ, ರೆಸಾರ್ಟ್‍ಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಹೋಂಸ್ಟೇ ಹಾಗೂ ರೆಸಾರ್ಟ್‍ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದರ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.