ಪೆÇನ್ನಂಪೇಟೆ, ನ. 3: ಪೆÇನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಕಾರು ನಿಲ್ದಾಣದ ಸಮೀಪ ಇರುವ ಲಕ್ಷ್ಮಿ ವೈನ್ಸ್ ಮದ್ಯದಂಗಡಿಯಲ್ಲಿ ಕಲಬೆರಕೆ ಮದ್ಯ ಮಾರಾಟ ಮಾಡುತಿದ್ದ ಸಂದÀರ್ಭ ಕಳೆದ ರಾತ್ರಿ ಗ್ರಾಹಕರ ಕೈಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ.ರಾಕಿ ದೇವಯ್ಯ ಎಂಬವರು ಇಂದು ರಾತ್ರಿ ಮದ್ಯ ಖರೀದಿಗೆ ಆಗಮಿಸಿದ್ದ ಸಂದÀರ್ಭ ಅವರು ಖರೀದಿಸಿದ ಮದ್ಯದ ಬಾಟಲಿಯ ಸೀಲ್ ಕಳಚಿರುವುದನ್ನು ಗಮನಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಅವರು ಇತರ ಗ್ರಾಹಕರು ಹಾಗೂ ಸ್ನೇಹಿತರ ಜೊತೆಗೂಡಿ ವೈನ್‍ಶಾಪ್‍ನಲ್ಲಿ ಪರಿಶೀಲಿಸಿದಾಗ ಹೆಚ್ಚು ಬೇಡಿಕೆ ಇರುವ ಕೆಲವು ಮದ್ಯದ ಬಾಟಲ್‍ಗಳ ಸೀಲ್ ಓಪನ್ ಆಗಿದ್ದುದು ಕಂಡು ಬಂದ ಕಾರಣ ಗ್ರಾಹಕರು ಶಾಪ್‍ನ ಮುಂದೆ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದÀರ್ಭ ಶಾಪ್‍ನ ಕ್ಯಾಶಿಯರ್ ಮದ್ಯದಂಗಡಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.
(ಮೊದಲ ಪುಟದಿಂದ)
ರಕ್ಷಣಾ ಮದ್ಯ!
ಕಲಬೆರಕೆ ಮಾಡಿದ ಮದ್ಯದ ಬಾಟಲಿಯ ಜೊತೆಗೆ ಸೈನಿಕರಿಗೆ ನೀಡುವ ಡಿಫೆನ್ಸ್ ಲಿಕ್ಕರ್ ಬಾಟಲಿಗಳು ಕೂಡ ಇಲ್ಲಿ ಸಿಕ್ಕಿವೆ. ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರಿಗೆ ಕಡಿಮೆ ಬೆಲೆಗೆ ಸಿಗುವ ಮದ್ಯ ಲಕ್ಷ್ಮಿ ವೈನ್ಸ್ ಶಾಪ್‍ನಲ್ಲಿ ಕಲಬೆರಕೆಯಾಗಿ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ. ಬಾಟಲಿ ಮೇಲೆ ಡಿಫೆನ್ಸ್ ಪರ್ಸನ್ ಓನ್ಲಿ ಎಂದು ಬರೆದಿದ್ದರೂ ಮದ್ಯದ ಅಂಗಡಿಯಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ.
ಈ ಬಗ್ಗೆ ರಾಕಿ ದೇವಯ್ಯ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ ಮೇರೆಗೆ ವೀರಾಜಪೇಟೆ ವಲಯದ ಅಬಕಾರಿ ಉಪ ಠಾಣಾಧಿಕಾರಿ ಮೋಹನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಲಬೆರಕೆಯಾಗಿದ್ದ ಸಾರಾಯಿ ಬಾಟಲಿಗಳನ್ನು ವಶ ಪಡಿಸಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯೂ ಕೂಡ ರಾಕಿ ದೇವಯ್ಯ ಖರೀದಿಸಿದ ಮದ್ಯದ ಬಾಟಲಿ ಸೀಲ್ ಓಪನ್ ಆಗಿತ್ತು, ರುಚಿ ನೋಡಿ ಪರೀಕ್ಷಿಸಿದಾಗ ಕಲಬೆರಕೆಯಾಗಿರುವುದು ಗೊತ್ತಾಗಿತ್ತು. ನಂತರ ಶಾಪ್‍ನಲ್ಲಿ ವಿಚಾರಿಸಿದಾಗ, ಅವರಿಗೆ ಬೇರೆ ಬಾಟಲಿ ನೀಡಿ ಕಳುಹಿಸಿದ್ದರು. ಮತ್ತೆ ನೆನ್ನೆ ರಾತ್ರಿ ಕೂಡ ಇದೇ ರೀತಿ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆ ಸೂಕ್ತ ಕ್ರಮಕೈಗೊಂಡು ಮದ್ಯ ಕಲಬೆರಕೆಯಿಂದ ಗ್ರಾಹಕರಿಗೆ ಆಗುತ್ತಿರುವ ಮೋಸ ಹಾಗೂ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕಾಗಿದೆ.
-ಚನ್ನನಾಯಕ