ಸುಂಟಿಕೊಪ್ಪ, ನ. 3: ಮಡಿಕೇರಿಯ ನೆಹರು ಯುವ ಕೇಂದ್ರ ಕೊಡಗು ಹಾಗೂ ಬೋಯಿಕೇರಿಯ ಹೆಲ್ಪಿಂಗ್ ಹ್ಯಾಂಡ್ ಅಸೋಶಿಯೇಷನ್ ಸಂಯುಕ್ತ ಆಶ್ರಯದಲ್ಲಿ ಭ್ರಷ್ಟಾಚಾರ ನಿರ್ಮೂಲನ ದಿನವನ್ನು ಆಚರಿಸಲಾಯಿತು.
ಭ್ರಷ್ಟಾಚಾರ ನಿರ್ಮೂಲನ ದಿನದ ಸಮಾರಂಭದ ಅಧ್ಯಕ್ಷತೆಯನ್ನು ಬೋಯಿಕೇರಿಯ ಹೆಲ್ಪಿಂಗ್ ಹ್ಯಾಂಡ್ ಅಸೋಶಿಯೇಷನ್ ಅಧ್ಯಕ್ಷ ಕೃಷ್ಣಪ್ಪ ವಹಿಸಿದ್ದರು.
ಭ್ರಷ್ಟಾಚಾರ ನಿರ್ಮೂಲನ ದಿನದ ಮಹತ್ವದ ಬಗ್ಗೆ ಗ್ರಾಮದ ಜನತೆಗೆ ಸಗಮೇಶ್ಕ್‍ರ್ ಹಾಗೂ ಗಣೇಶ್ ದೇಶದಲ್ಲಿ ಭ್ರಷ್ಟಾಚಾರ ಮುಕ್ತಗೊಳ್ಳಬೇಕಿದ್ದರೆ ಪ್ರತಿ ಗ್ರಾಮದ ಜನತೆಯು ಜಾಗೃತಿಗೊಳ್ಳಬೇಕಿದೆ ಎಂದರು. ಭ್ರಷ್ಟಾಚಾರದ ಪಿಡುಗಿನ ಬಗ್ಗೆ ರಕ್ಷಿತಾ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಸಮಾರಂಭದ ಮೊದಲಿಗೆ ಸುಂದರಿ ಪ್ರಾರ್ಥಿಸಿ, ಪ್ರಜ್ವಲ್ ತಿಮಣ್ಣ ಸ್ವಾಗತಿಸಿ, ವಂದಿಸಿದರು.