ವೀರಾಜಪೇಟೆ, ನ. 2: ವೀರಾಜ ಪೇಟೆ ಪಟ್ಟಣ ಪಂಚಾ ಯಿತಿಯ ಅಧ್ಯಕ್ಷ ಪದವಿಗೆ ಮೀಸ ಲಾತಿಯ ಆಧಾರದಲ್ಲಿ ಭಾರತೀಯ ಜನತಾ ಪಾರ್ಟಿಗೆ ಲಭಿಸಿರುವುದರಿಂದ 30 ತಿಂಗಳ ಅವಧಿಯನ್ನು ಮೀಸಲಾತಿ ಅರ್ಹತೆ ಪಡೆದಿರುವ ಟಿ.ಎಂ.ಪೂರ್ಣಿಮಾ ಹಾಗೂ ಎಚ್.ಆರ್.ಸುಶ್ಮಿತಾ ಇವರ ನಡುವೆ ಸಮವಾಗಿ ಹಂಚಲು ವರಿಷ್ಠರು ಒಲವು ತೋರಿದ್ದು ಮೊದಲ ಅಧಿಕಾರಾವಧಿ ಯನ್ನು ಯಾರಿಗೆ ನೀಡ ಬೇಕೆಂಬುದರ ಕುರಿತು ಚುನಾವಣೆಯ ತಾ. 3 ರಂದು (ಇಂದು) ಬೆಳಿಗ್ಗೆ 10ಗಂಟೆಗೆ ಪಕ್ಷದ ವರಿಷ್ಠರು ತೀರ್ಮಾನಿಸಿ ಬಹಿರಂಗ ಪಡಿಸಲಿದ್ದಾರೆ.ಇಂದು ಪಕ್ಷದ ತಾಲೂಕು ಸಮಿತಿಯ ಅಧ್ಯಕ್ಷರು, ನಗರ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಸಮಿತಿಯ ಅಧ್ಯಕ್ಷರು ಜೊತೆಗೆ ಪಕ್ಷದ ಪ್ರಮುಖರು ಸೇ ಅಧ್ಯಕ್ಷ, ಉಪಾಧ್ಯಕ್ಷ ಪದವಿಯ ಅಭ್ಯರ್ಥಿಗಳ ಆಯ್ಕೆ ಸಂಬಂಧದಲ್ಲಿ ವಿಚಾರ ವಿನಿಮಯ ಮಾಡಿದರು. ಅಂತಿಮವಾಗಿ ತಾ.3ರಂದು ಚುನಾವಣೆಯ ದಿನ ಬೆಳಿಗ್ಗೆ ಶಾಸಕರು ಸಂಸದರ ನಡುವೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ಈಗ ಬಿಜೆಪಿಯ ಎಂಟು ಸ್ಥಾನಗಳಲ್ಲಿ ಬಹುತೇಕ ಎಲ್ಲ ಸದಸ್ಯರುಗಳು ಉಪಾಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಯಾಗಿರುವುದರಿಂದ ಪಕ್ಷದ ವರಿಷ್ಠರು ನಾಮಪತ್ರ ಸಲ್ಲಿಸುವ ಮೊದಲೇ ಲಾಟರಿ ಮೂಲಕ ಅಭ್ಯರ್ಥಿ ಆಯ್ಕೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.(ಮೊದಲ ಪುಟದಿಂದ) ಚುನಾವಣಾ ದಿನ ಪಟ್ಟಣ ಪಂಚಾ ಯಿತಿಯಲ್ಲಿ ಮತದಾನದ ಹಕ್ಕು ಪಡೆದಿರುವ ಶಾಸಕರು, ಸಂಸದರು ಮತದಾನದಲ್ಲಿ ಭಾಗವಹಿಸುವುದಾಗಿ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಸ್ಪರ್ಧೆ

ಕಾಂಗ್ರೆಸ್ ಪಕ್ಷೇತರರ ಮಿತ್ರ ಒಕ್ಕೂಟದ ಪೈಪೋಟಿಯಿಂದ ಉಪಾಧ್ಯಕ್ಷ ಪದವಿಗೆ ಸ್ಪರ್ಧೆ ಖಚಿತವಾಗಿದೆ. ಕಾಂಗ್ರೆಸ್ ಹಾಗೂ ಪಕ್ಷೇತರರ ಮಿತ್ರ ಪಕ್ಷದ ಒಕ್ಕೂಟದಲ್ಲಿ ಒಟ್ಟು 10 ಮಂದಿ ಇದ್ದು, ವಿರುದ್ಧ ಗುಂಪಿನ ಬಿಜೆಪಿಯಲ್ಲಿಯೂ ಎಂಟು ಸದಸ್ಯರಿದ್ದು ಶಾಸಕರು ಸಂಸದರು ಸೇರಿದಾಗ ಈ ಗುಂಪಿಗೂ ಹತ್ತು ಮತಗಳಾಗಿ ಸಮನಾಗುವುದರಿಂದ ಚುನಾವಣಾಧಿಕಾರಿ ಲಾಟರಿ ಮೂಲಕ ಉಪಾಧ್ಯಕ್ಷ ಪದವಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಕಾಂಗ್ರೆಸ್ ಪಕ್ಷೇತರರ ಮಿತ್ರ ಪಕ್ಷದ ಒಕ್ಕೂಟದ ಎಲ್ಲ ಹತ್ತು ಮಂದಿ ಸದಸ್ಯರುಗಳು ನಿಗೂಢವಾಗಿ ರೆಸಾರ್ಟ್‍ನಲ್ಲಿ ಸೇರಿದ್ದಾರೆ. ಉಪಾಧ್ಯಕ್ಷರ ಆಯ್ಕೆ ಬಗ್ಗೆಯೂ ಚರ್ಚಿಸಿರುವ ಈ ಒಕ್ಕೂಟ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರುವ 4ಮಂದಿ ಪಕ್ಷೇತರರು ಯಾರನ್ನು ಬಿಜೆಪಿ ತೆಕ್ಕೆಗೆ ಒಲಿಸಿಕೊಳ್ಳದಂತೆ ನಿಗೂಢವಾದ ಪ್ರಯತ್ನ ನಡೆಸಿದೆ. ಕಾಂಗ್ರೆಸ್ ಮಿತ್ರ ಪಕ್ಷದ ಒಕ್ಕೂಟದ ಪ್ರಮುಖರ ಪ್ರಕಾರ ತಾ. 3ರಂದು (ಇಂದು) ಮಿತ್ರ ಪಕ್ಷದ ಒಟ್ಟು 10ಮಂದಿ ಹೆಸರನ್ನು ಲಾಟರಿ ಹಾಕಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಚುನಾವಣೆಯಲ್ಲಿ ಎರಡು ಪಕ್ಷಗಳ ನಡುವೆ ಲಾಟರಿಯಾದರೂ ಪದವಿಗಾಗಿ ಕಾಯಲು ನಿರ್ಧರಿಸಿರುವುದಾಗಿ ಗೊತ್ತಾಗಿದೆ.