ಶನಿವಾರಸಂತೆ, ನ. 2: ಕೊಡ್ಲಿಪೇಟೆ ಗ್ರಾ.ಪಂ. ಮಾಜಿ ಅಧ್ಯಕ್ಷ ಔರಂಗಜೇಬ್ ಅವರಿಗೆ ಸೇರಿದ ಕಸೂರು ಗ್ರಾಮದಲ್ಲಿರುವ ಜಮೀನಿನಲ್ಲಿ ತಾ. 1 ರಂದು ಕೆಲಸದವರು ಕೆಲಸ ಮಾಡುತ್ತಿರುವಾಗ, ಪಕ್ಕದ ಜಮೀನಿನವರಾದ ನಾಲ್ವರು ಆರೋಪಿಗಳು ಕಾರಿನಲ್ಲಿ (ಕೆಎ 03 ಎನ್‍ಸಿ 4298) ಅಕ್ರಮ ಪ್ರವೇಶ ಮಾಡಿ ಕೆಲಸ ಮಾಡುತ್ತಿದ್ದವರಿಗೂ, ನನಗೂ ಕತ್ತಿ ತೋರಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ದೊರೆತ ಪುಕಾರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಕ್ಕದ ಜಮೀನಿನ ಮಾಲೀಕರುಗಳಾದ ಎಜಾಸ್ ಹುಸೇನ್, ಪತ್ನಿ ಮಮ್ತಾಜ್, ಮಕ್ಕಳಾದ ಪುರ್‍ಖಾನ್ ಮತ್ತು ಅದ್ನನ್ ಕಾರಿನಲ್ಲಿ ಬಂದು ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕೆಲಸ ಮಾಡುತ್ತಿದ್ದ ಅಬೂಬಕರ್, ಸುರೇಶ್ ಹಾಗೂ ನನಗೂ ಕತ್ತಿ ತೋರಿಸಿ ತಡೆದು ನಿಲ್ಲಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣಾಧಿಕಾರಿ ಹೆಚ್.ಇ. ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಠಾಣೆಯ ಹೆಡ್ ಕಾನ್ಸ್‍ಟೇಬಲ್ ಸಿದ್ದಯ್ಯ ಕಾಲಂ 447, 341, 506 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.