ಪೆರಾಜೆ, ನ. 2: ಸ್ವಾತಂತ್ರ್ಯ ಹೋರಾಟಗಾರ ಅಮರ ಸುಳ್ಯ ದಂಗೆಯ ಕ್ರಾಂತಿಕಾರಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣೆ ಕಾರ್ಯಕ್ರಮವನ್ನು ಸರಳವಾಗಿ ಕೋಟೆ ಪೆರಾಜೆ ಶಾಲಾ ವಠಾರದದಲ್ಲಿ ನಡೆಸಲಾಯಿತು. ಕೊಡಗಿನ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡುವ ಮೂಲಕ ನಾಡಿಗಾಗಿ ಹೋರಾಡಿದ ವೀರ ಪುತ್ರನ ತ್ಯಾಗ ಬಲಿದಾನಕ್ಕೆ ಗೌರವ ಸಲ್ಲಿಸಲಾಯಿತು. ಸಭೆಯನ್ನು ಉದ್ದೇಶಿಸಿ ನೋಹಿತ್ ನಿಡ್ಯಮಲೆ ನಮನ ನುಡಿಗಳನ್ನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿನ್ನಪ್ಪ ಅಡ್ಕ ವಹಿಸಿದರು, ಈ ಸಂದರ್ಭ ಜಾಗರಣ ಸಂಚಾಲಕ ಶುಭಾಷ್ ಬಂಗಾರಕೋಡಿ ,ವಿನಯ ಮೂಲೆಮಜಲು ಸೇರಿದಂತೆ ಸಂಘದ ಸದಸ್ಯರು , ಪದಾಧಿಕಾರಿಗಳು, ಊರಿನ ಗಣ್ಯರು ಉಪಸ್ಥಿತರಿದ್ದರು.