ವೀರಾಜಪೇಟೆ ನ. 1: ಸರಕಾರದ ಈಗಿನ ಮೀಸಲಾತಿಯ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಭಾರತೀಯ ಜನತಾ ಪಾರ್ಟಿಯಿಂದ ಸ್ಫರ್ಧಿಸಿ ಇಲ್ಲಿನ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ಹದಿನೇಳನೆ ವಾರ್ಡ್‍ನ ಎಚ್.ಎಂ. ಪೂರ್ಣಿಮಾ ಹಾಗೂ ನಾಲ್ಕನೇ ವಾರ್ಡ್‍ನಿಂದ ಆಯ್ಕೆಯಾಗಿರುವ ಸುಶ್ಮಿತಾ ಈ ಇಬ್ಬರು ಅರ್ಹತೆ ಪಡೆದಿದ್ದು, ಇಬ್ಬರಲ್ಲಿ ಅಧ್ಯಕ್ಷ ಪದವಿ ಯಾರಿಗೆ ನೀಡಬೇಕೆಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಬೇಕಾಗಿದೆ. ಪಕ್ಷದ ವರಿಷ್ಠರು ಇಂದು ಸಂಜೆಯವರೆಗೂ ಅಧ್ಯಕ್ಷ ಪದವಿಯ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲವೆನ್ನಲಾಗಿದೆ.

ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರ ಮೂಲದ ಪ್ರಕಾರ ಅಧ್ಯಕ್ಷ ಉಪಾಧ್ಯಕ್ಷ ಪದವಿಗಳಿಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ತಾ.2ರಂದು (ಇಂದು) ಪಕ್ಷದ ವರಿಷ್ಠರು ನಡೆಸಲಿದ್ದು, ತಾ.3ರಂದು ಚುನಾವಣೆಯ ದಿನ ಬೆಳಿಗ್ಗೆ ಎರಡು ಪದವಿಗಳಿಗೆ ಆಯ್ಕೆಯಾಗು ವವರ ಹೆಸರುಗಳನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಕಾಂಗ್ರೆಸ್ ಪಕ್ಷ ಆರು ಸ್ಥಾನಗಳನ್ನು ಗಳಿಸಿದ್ದು ಒಂದು ಜೆ.ಡಿ.ಎಸ್. ಮೂರು ಪಕ್ಷೇತರ ಅಭ್ಯರ್ಥಿಗಳ ಬೆಂಬಲ ದೊರೆತರೆ ಹತ್ತು ಸ್ಥಾನಗಳ ಸ್ಪಷ್ಟ ಬಹುಮತದೊಂದಿಗೆ ಪಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತೀರ್ಮಾನಿಸಿದೆ. ಪಕ್ಷೇತರ ಅಭ್ಯರ್ಥಿ ಎಂ.ಕೆ.ಜಲೀಲ್ ಉಪಾಧ್ಯಕ್ಷ ಪದವಿ ನೀಡುª ಷರತ್ತಿನೊಂದಿಗೆ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದರೂ ಬಿಜೆಪಿ ವರಿóಷ್ಠರು ಎರಡನೇ ಬಾರಿಗೆ ಈ ಪದವಿ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜಲೀಲ್ ಈಗ ಕಾಂಗ್ರೆಸ್ ಪಕ್ಷದ ನಿಲುವಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.

ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧಿಸಿರುವ ಜನತಾದಳದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿರುವ ಎಸ್.ಎಚ್.ಮತೀನ್ ಅವರು ಯಾವುದೇ ಕಾರಣಕ್ಕೂ ಉಪಾಧ್ಯಕ್ಷ ಪದವಿಯ ಸ್ಪರ್ಧೆಯಿಂದ ಸರಿಯುವುದಿಲ್ಲ ಈ ಪದವಿಗೆ ಪಕ್ಷೇತರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿರುವುದಾಗಿ ತಿಳಿಸಿದ್ದಾರೆ.

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅವರು ಪಕ್ಷೇತರ ಬೆಂಬಲಿತ ಕಾಂಗ್ರೆಸ್ ಪಕ್ಷದಲ್ಲಿ 4 ಮಂದಿ ಪಕ್ಷೇತರರು ಸೇರಿದಂತೆ ಸಾಮಾನ್ಯ ಮೀಸಲಾತಿ ಇರುವ ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು 10 ಮಂದಿಗೂ ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳನ್ನು ಲಾಟರಿ ಮೂಲಕ ತಾ. 3ರಂದು ಆಯ್ಕೆ ಮಾಡಿ ಹೆಸರನ್ನು ಬೆಳಿಗ್ಗೆ 10ಗಂಟೆಗೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಸಂಸದರು ಹಾಜರಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಲಾಟರಿ :ನವೆಂಬರ್ 3ರಂದು ನಡೆಯುವ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮತದಾನದ ಅರ್ಹತೆ ಪಡೆದಿರುವ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭಾಗವಹಿಸಿದರೆ ಬಿಜೆಪಿ ಅಭ್ಯರ್ಥಿಗೆ ಈಗಿನ ಎಂಟು ಸದಸ್ಯರುಗಳೊಂದಿಗೆ ಈ ಎರಡು ಮತಗಳು ಸೇರಿ ಹತ್ತು ಮತಗಳು ಬರಲಿವೆ. ಎರಡು ಪಕ್ಷಗಳ ಪೈಪೋಟಿ ನಡುವೆ ತಲಾ ಹತ್ತು ಮತಗಳು ಸಮನಾಗಿ ಬರುವುದರಿಂದ ಆಗಲೂ ಆಯ್ಕೆಗಾಗಿ ಚುನಾವಣಾಧಿಕಾರಿ ಲಾಟರಿ ಪ್ರಕ್ರಿಯೆ ಅನುಸರಿಸಬೇಕಾಗಿದೆ.

ಬಿಜೆಪಿಯೂ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಎರಡು ಪದವಿಗಳನ್ನು ತಾನೇ ಉಳಿಸಿ ಕೊಳ್ಳಬೇಕೆಂಬ ಹವಣಿಕೆಯಲ್ಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಪಕ್ಷಗಳ ಸ್ಪರ್ಧೆಯಲ್ಲಿ ಯಾರಿಗೆ ಈ ಪದವಿ ಲಭಿಸಲಿದೆ ಎಂದು ಕಾದು ನೋಡ ಬೇಕಾಗಿದೆ.