ಕೂಡಿಗೆ, ನ. 1: ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ ಕುಶಾಲನಗರ ಉಪ ವಿಭಾಗದ ಕೂಡಿಗೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಕೃಷ್ಣ ಮೇಸ್ತ್ರಿ ಅವರು ನಿವೃತ್ತಿ ಹೊಂದಿದ ಹಿನ್ನೆಲೆ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳಿಂದ ಗೌರವಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ಇಂಜಿನಿಯರ್ ವಿನಯ್‍ಕುಮಾರ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಇಂಜಿನಿಯರ್‍ಗಳಾದ ಲವಕುಮಾರ್, ರಮೇಶ್, ಗೋವಿಂದ್, ಕೃಷ್ಣರಾಜ್ ಸೇರಿದಂತೆ ನಿವೃತ್ತ ನೌಕರರು, ಮಹಿಳಾ ನೌಕರರು ಸಿಬ್ಬಂದಿ ವರ್ಗದವರು ಹಾಜರಿದ್ದರು.