ಸೋಮವಾರಪೇಟೆ, ನ. 1: ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ತಾಲೂಕಿನ ಮಾಲಂಬಿ ಅಂಗನವಾಡಿಯಲ್ಲಿ ಕೋವಿಡ್-19 ಹಿನ್ನೆಲೆ ಮಕ್ಕಳು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು.

ಸಹಾಯವಾಣಿ ಕೇಂದ್ರದ ಕಾರ್ಯಕರ್ತೆ ಬಿ.ಕೆ. ಕುಸುಮ ಅವರು ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಬಾಲ್ಯ ವಿವಾಹ ತಡೆ ಕಾಯ್ದೆ, ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಸೇರಿದಂತೆ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಸಹಾಯವಾಣಿ ಕೇಂದ್ರದ ವತಿಯಿಂದ ಮಕ್ಕಳಿಗೆ ಮಾಸ್ಕ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ ಕೇಂದ್ರದ ಯೋಗೇಶ್, ಅಂಗನವಾಡಿ ಕಾರ್ಯಕರ್ತೆ ವೇದಕುಮಾರಿ, ಆಶಾ ಕಾರ್ಯಕರ್ತೆ ರಾಧ, ಸ್ತ್ರೀ ಶಕ್ತಿ ಸಂಘದ ಸುಮತಿ, ಜ್ಯೋತಿ ಸೇರಿದಂತೆ ಇತರರು ಹಾಜರಿದ್ದರು.