ಸೋಮವಾರಪೇಟೆ, ನ. 1: ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆ ಇನ್ನಷ್ಟು ಪ್ರಜ್ವಲಿಸ ಬೇಕೆಂದರೆ ಕನ್ನಡಿಗರು ತಮ್ಮ ದೈನಂದಿನ ಜೀವನದಲ್ಲಿ ಕನ್ನಡ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಕನ್ನಡಿಗರು ಪ್ರತಿದಿನದ ವ್ಯವಹಾರ, ವ್ಯಾಪಾರ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಕನ್ನಡವನ್ನೇ ಬಳಸಬೇಕು. ನಿತ್ಯದ ಬದುಕಿನಲ್ಲಿ ಕನ್ನಡ ಕೇವಲ ಭಾಷೆಯಾಗದೆ ಜೀವದ ನಾಡಿಮಿಡಿತವಾಗಬೇಕು. ಕನ್ನಡೇತರರನ್ನು ಕನ್ನಡ ಬೆಳಗಿಸುವ ದೀಪಗಳನ್ನಾಗಿಸಬೇಕು ಎಂದು ಶಾಸಕರು ತಿಳಿಸಿದರು. ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರು, ಕರ್ನಾಟಕವು (ಮೊದಲ ಪುಟದಿಂದ) ತನ್ನದೇ ಆದ ಹಿರಿಮೆ ಗರಿಮೆ ಮತ್ತು ಪರಂಪರೆಯುಳ್ಳ ರಾಜ್ಯವಾಗಿದ್ದು, ಪ್ರಕೃತಿ ಸೌಂದರ್ಯ, ವನ್ಯಜೀವಿಗಳ ಸಮೃದ್ಧಿ ಹಾಗೂ ವಿಶ್ವ ಪರಂಪರೆಯ ಸಾಲಿನಲ್ಲಿ ಪ್ರಸಿದ್ಧ ಪಡೆದಿದೆ ಎಂದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಸರಕಾರಿ ಶಾಲೆ ಗಳೊಂದಿಗೆ ಖಾಸಗಿ ಶಾಲೆಗಳಲ್ಲೂ ಕನ್ನಡ ಕಡ್ಡಾಯವಾಗಬೇಕೆಂದು ಅಭಿಮತ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ತಾ.ಪಂ. ಸದಸ್ಯೆ ತಂಗಮ್ಮ, ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ಪೆÇಲೀಸ್ ವೃತ್ತ ನೀರೀಕ್ಷಕರಾದ ಮಹೇಶ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಜೆ.ಸಿ.ಶೇಖರ್ ಎಸ್. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿಕ್ಷಕಿ ಕವಿತ ಮತ್ತು ತಂಡದಿಂದ ರಾಷ್ಟ್ರಗೀತೆ, ಸೌಭಾಗ್ಯ ತಂಡದಿಂದ ರೈತ ಗೀತೆ ಪ್ರಸ್ತುತ ಪಡಿಸಲಾಯಿತು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಎಸ್.ಡಿ.ವಿಜೇತ್ ವಂದಿಸಿದರು.

ಲ್ಯಾಪ್‍ಟಾಪ್ ವಿತರಣೆ: ಸಮಾರಂಭದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ. ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕುಶಾಲನಗರ ಸರ್ಕಾರಿ ಪೌಢಶಾಲೆಯ ಎಂ.ವಿಘ್ನೇಶ್, ಶಿರಂಗಾಲ ಪ್ರೌಢಶಾಲೆಯ ಎನ್.ಆರ್.ನಿಸರ್ಗ, ಆಲೂರು ಸಿದ್ದಾಪುರ ಪ್ರೌಢಶಾಲೆಯ ಎಸ್.ಪಿ.ಶಾಲಿನಿ, ತೊರೆನೂರು ಪ್ರೌಢಶಾಲೆಯ ಟಿ.ಜಿ.ಧನ್ಯ ಅವರುಗಳಿಗೆ ಸರ್ಕಾರದ ವತಿಯಿಂದ ಲ್ಯಾಪ್‍ಟಾಪ್ ವಿತರಿಸಲಾಯಿತು.

ಪ್ರಸಕ್ತ ಸಾಲಿನ ಎಸ್.ಎಸ್. ಎಲ್.ಸಿ.ಯ ಕನ್ನಡ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಪಡೆದ ಸೋಮವಾರಪೇಟೆ ಸಾಂದೀಪನಿ ಶಾಲೆಯ ಕೆ.ಆರ್.ಅನುಜಾ, ಶನಿವಾರಸಂತೆ ವಿಘ್ನೇಶ್ವರ

ಬಾಲಿಕಾ ಶಾಲೆಯ ವಿ.ವಿ.ಸೌಜನ್ಯ, ಕುಶಾಲನಗರ ಫಾತಿಮಾ ಶಾಲೆಯ ಸೇವಂತ್ ಪ್ರಬುದ್ಧ್, ಸಯ್ಯದ್ ಸಮೀರ್, ಕೆ.ಕೆ.ಸಿಂಚನ, ಆಲೂರು ಸಿದ್ದಾಪುರ ಮೊರಾರ್ಜಿ ಶಾಲೆಯ ಹಸ್ತವಿ ಗೌಡ, ಸೋಮವಾರಪೇಟೆ ಓ.ಎಲ್.ವಿ. ಶಾಲೆಯ ಬಿ.ಜಿ.ಸೃಜನ್, ಕೂಡಿಗೆ ಮೊರಾರ್ಜಿ ಶಾಲೆಯ ಎಂ.ಡಿ.ವಿಜಯ್, ನಂಜ ರಾಯಪಟ್ಟಣ ಪ್ರೌಢಶಾಲೆಯ ಎಂ.ಎಸ್.ತೇಜ, ಕೂಡಿಗೆ ಆಂಜೆಲಾ ವಿದ್ಯಾನಿಕೇತನ ಶಾಲೆಯ ಸಿ. ಸಂಜನಾರಾವ್, ಸಫಾನ ಅವರುಗಳನ್ನು ಸನ್ಮಾನಿಸಲಾಯಿತು.