ಚೆಟ್ಟಳ್ಳಿ, ಅ. 31: ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಅಧೀನದಲ್ಲಿ ಈಗಾಗಲೇ ಯುಎಇ, ಕತಾರ್, ಬಹರೈನ್ ಸಮಿತಿಯನ್ನು ರಚಿಸಲಾಗಿದ್ದು, ಇದೀಗ ಸೌದಿ ಅರೇಬಿಯಾ ಕೇಂದ್ರೀಕರಿಸಿ ಕಾರ್ಯನಿರ್ವಹಿಸಲು ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ಆನ್‍ಲೈನ್‍ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಅಧ್ಯಕ್ಷ ಹುಸೈನ್ ಫೈಝಿ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜಿಸಿಸಿ ಕೋಶಾಧಿಕಾರಿ ಅಬ್ದುಲ್ ರಝಾಕ್ ಫೈಝಿ ಸಮಿತಿ ರಚನೆಯ ಮೇಲುಸ್ತುವಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಬ್ದುಸ್ಸಲಾಂ ಫೈಝಿ ಎಡಪ್ಪಾಲ ನೂತನ ಸಮಿತಿಯನ್ನು ಅನುಮೋದಿಸಿ ಸಂಘಟನೆಯ ಮಹತ್ವ, ಮುಂದಿನ ದಿನಗಳಲ್ಲಿ ರೂಪಿಸಬೇಕಾದ ಮಹತ್ವದ ರೂಪು ರೇಷೆಗಳ ಬಗ್ಗೆ ವಿವರಿಸಿದರು.

ಎಸ್.ಕೆ.ಎಸ್.ಎಸ್.ಎಫ್. ಸೌದಿ ಅರೇಬಿಯಾ ಕೊಡಗು ನೂತನ ಸಮಿತಿ ಅಧ್ಯಕ್ಷರಾಗಿ ಝೈನುದ್ದೀನ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಗಫೂರ್ ವೀರಾಜಪೇಟೆ, ಕೋಶಾಧಿಕಾರಿಯಾಗಿ ಅಶ್ರಫ್ ಎಮ್ಮೆಮಾಡು, ಉಪಾಧ್ಯಕ್ಷರುಗಳಾಗಿ ಉಮರ್ ಅಶ್ರಫಿ ಹಾಗೂ ಹಂಸ ದಾರಿಮಿ ಪೆÇನ್ನಂಪೇಟೆ, ಜೊತೆ ಕಾರ್ಯದರ್ಶಿಗಳಾಗಿ ದಾವೂದ್ ಕೊಡ್ಲಿಪೇಟೆ, ಕಮರುದ್ದೀನ್ ವೀರಾಜಪೇಟೆ ಹಾಗೂ ಶರೀಫ್ ಶನಿವಾರಸಂತೆ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಕಾರ್ಯದರ್ಶಿಯಾಗಿ ಅಶ್ಫಾಕ್ ಕೊಡ್ಲಿಪೇಟೆ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಜಿಬಿನ್ ಪೆರುಂಬಾಡಿ ಇವರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರುಗಳಾಗಿ ಸಿದ್ದಿಕ್ ಬಾಖವಿ, ರಝಾಕ್ ಫೈಝಿ, ಶಿಹಾಬ್ ಆಲುಂಗಲ್, ಅಬ್ಬಾಸ್ ಹಾಜಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶರೀಫ್ ಕೊಡ್ಲಿಪೇಟೆ, ಅಬೂ ಸ್ವಾಲಿಹ್ ಯಮಾನಿ, ಅಬ್ದುಲ್ ಅಝೀಝ್, ತಾಜುದ್ದೀನ್ ಮುಸ್ಲಿಯಾರ್, ಅಶ್ರಫ್ ವೀರಾಜಪೇಟೆ, ಹನೀಫ 7ನೇ ಹೊಸಕೋಟೆ, ಫೈಝಲ್ ಮದೀನ, ಸಿದ್ದೀಕ್ ವೀರಾಜಪೇಟೆ, ಝಕರಿಯ ಮದೀನ ಹಾಗೂ ಸಿದ್ದೀಕ್ ಮಕ್ಕಾ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಸಮಿತಿಯ ನಾಯಕರುಗಳು ಮತ್ತು ಯುಎಇ, ಕತಾರ್ ಹಾಗೂ ಬಹರೈನ್ ಸಮಿತಿಯ ಪ್ರತಿನಿಧಿಗಳು ಭಾಗವಹಿಸಿದ್ದರು.