ಕೂಡಿಗೆ, ನ. 1: ಕೂಡಿಗೆ ಶಕ್ತಿ ವೃದ್ಧಾಶ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಚಿತವಾಗಿ ಮಾಸ್ಕ್ ವಿತರಣೆ ಮತ್ತು ಭೋಜನ ವ್ಯವಸ್ಥೆ ಮಾಡಲಾಯಿತು. ಕೊರೊನಾ ವಾರಿಯರ್ಸ್ ಸೀಮಕುಮಾರ್ ಅವರನ್ನು ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಕಾವಲುಪಡೆ ಕೊಡಗು ಜಿಲ್ಲಾ ಅಧ್ಯಕ್ಷ ಎಂ. ಕೃಷ್ಣ, ಮಹಿಳಾ ನಗರಧ್ಯಕ್ಷೆ ಇಂದಿರಾ, ವಿದ್ಯಾರ್ಥಿ ಘಟಕದ ಅಧ್ಯಕ್ಷೆ ನೇಹಾ, ಸದಸ್ಯರುಗಳಾದ ಗಣೇಶ್, ಮಂಜುಳಾ ಮತ್ತು ವೃದ್ಧಾಶ್ರಮದ ನಿರ್ದೇಶಕ ಚಂದ್ರು ಇದ್ದರು.