ಗೋಣಿಕೊಪ್ಪಲು, ಅ. 31: ಅಮ್ಮತ್ತಿಯ ಜೂಮರ್ಸ್ ಅಸೋಸಿ ಯೇಷನ್ ಹಾಗೂ ಅರ್.ಐ.ಹೆಚ್.ಪಿ. ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು. ಆಸ್ಪತ್ರೆ ಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಮಿಲನ ಯುವಕ ಸಂಘ, ನಾಗರಿಕರು ಹಾಗೂ ಆಯೋಜಕರ ಪದಾಧಿಕಾರಿ ಗಳು ರಕ್ತ ದಾನ ಮಾಡಿದರು. ಮುಂಜಾನೆಯಿಂದಲೇ ನಡೆದ ಕಾರ್ಯಕ್ರಮದಲ್ಲಿ 38 ಮಂದಿ ರಕ್ತದಾನ ಮಾಡಿದರು.

ಸಮಾರೋಪ ಸಮಾರಂಭವು ಅಮ್ಮತ್ತಿಯ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಜೂಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಮೊಳ್ಳೆರ ಹರ್ಷ ಅಧ್ಯಕ್ಷತೆಯಲ್ಲಿ ಜರುಗಿತು.ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರರಾದ ಸುವೀನ್ ಗಣಪತಿ ಗ್ರಾಮೀಣ ಬಾಗದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಮತ್ತೋರ್ವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೈಸೂರು ಬೃಂದಾವನ ಆಸ್ಪತ್ರೆಯ ಅಪ್ಪಂಡೇರಂಡ ಮನೋಜ್ ಮಾದಪ್ಪ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳು ನಡೆಯುವಂತಾಗಲಿ ಎಂದರು.

ವೇದಿಕೆಯಲ್ಲಿ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಮಧುಮಾದಪ್ಪ, ವಿ.ಎಸ್.ಎಸ್.ಎನ್. ನಿರ್ದೇಶಕ ಜಯ ಉತ್ತಪ್ಪ, ದಾನಿಗಳಾದ ಜಯ ನಾಣಯ್ಯ, ಗಣ್ಯರು ಉಪಸ್ಥಿತರಿದ್ದರು. ಕಾರ್ಯ ಕ್ರಮದಲ್ಲಿ ಸ್ಥಳಿಯ ಹಿರಿಯ ವ್ಯೆದ್ಯರಾದ ಡಾ. ಕೋಳೆರ ಬೋಪಣ್ಣ, ಸೇರಿದಂತೆ ಆರೋಗ್ಯ ಸಹಾಯಕಿ ಕೆ.ಬಿ.ಸೀತಮ್ಮ, ಆಶಾಕಾರ್ಯಕರ್ತೆ ಯರಾದ ಪಿ.ಡಿ.ಈಶ್ವರಿ, ಕೆ.ಎಂ.ಶಾಜಿದಾ, ಹೆಚ್.ಬಿ.ರೋಹಿಣಿ, ಎಂ.ಎಸ್. ಶಶಿಕಲಾ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜೂಮರ್ಸ್ ಅಸೋಸಿಯೇಷನ್‍ನ ಖಜಾಂಜಿ ಮುಕ್ಕಾಟೀರ ಬೋಪಣ್ಣ ಸ್ವಾಗತಿಸಿದರು. ಕಾರ್ಯದರ್ಶಿ ಕುಟ್ಟಂಡ ಶರತ್ ನಿರೂಪಿಸಿದರು. ಪಳೆಯತಂಡ ಹರಿಬಿದ್ದಪ್ಪ ವಂದಿಸಿದರು.

ಕುಟ್ಟಂಡ ಭೂಮಿಕ ಕಾವೇರಪ್ಪ ಪ್ರಾರ್ಥಿಸಿದರು. ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.