ನಾಪೋಕ್ಲು, ಅ. 31: ಕೋವಿಡ್ 19 ಎಂಬ ಮಹಾಮಾರಿಯಿಂದ ಅನಿವಾರ್ಯವಾಗಿ ಕ್ರೀಡಾಕೂಟವನ್ನು ಸಾಂಕೇತಿಕವಾಗಿ ಹಾಗೂ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಆಚರಿಸಲಾಗುತ್ತಿದೆ ಎಂದು ಪಾರಾಣೆ ಕೇಂದ್ರ ಕ್ರೀಡಾಮಂಡಳಿಯ ಅಧ್ಯಕ್ಷ ಮೇಚಂಡ ಸಾಬ ದೇವಯ್ಯ ಹೇಳಿದರು. ಅವರು ಇಂದು ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಪಾರಾಣೆ ಕೇಂದ್ರ ಕ್ರೀಡಾಮಂಡಳಿ ವತಿಯಿಂದ ಆಯೋಜಿಸಿದ್ದ ಸಾಂಕೇತಿಕ ಕ್ರೀಡೋತ್ಸವದ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಬಳಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯಗಳು ಕೆಲವು ಬಾಕಿ ಇದ್ದು ಕ್ರೀಡಾಭಿಮಾನಿಗಳ ಸಹಕಾರದೊಂದಿಗೆ ಪೂರ್ಣಗೊಳಿಸಿ ಮುಂದಿನ ವರ್ಷ ವಿಜೃಂಭಣೆಯಿಂದ ಕ್ರೀಡೋತ್ಸವ ಆಚರಿಸಲಾಗುವುದು ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾಮಂಡಳಿ ದತ್ತಿನಿಧಿ ಅಧ್ಯಕ್ಷರಾಗಿದ್ದ ಬೊಳಕಾರಂಡ ಡಾಲಿ ಮಂದಣ್ಣ, ಪಾರಾಣೆ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಹಾಗೂ ಕ್ರೀಡಾಮಂಡಳಿಯಲ್ಲಿ ದುಡಿದ ಕುಂಡ್ಯೋಳಂಡ ಪೂವಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಉಮಾಪ್ರಭು, ಜಿ.ಪಂ. ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ, ಪಾರಾಣೆ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅಪ್ಪನೆರವಂಡ ರಾಜಾಪೂವಯ್ಯ, ಕ್ರೀಡಾಮಂಡಳಿ ಉಪಾಧ್ಯಕೆÀ್ಷ ಬೊಳ್ಳಚೆಟ್ಟೀರ ಶಾಂತಿ, ದತ್ತಿನಿಧಿ ಅಧ್ಯಕ್ಷ ನಾಯಕಂಡ ಚೆಂಗಪ್ಪ, ಕ್ರೀಡಾಮಂಡಳಿ ಮಾಜಿ ಅಧ್ಯಕ್ಷ ಪಾಡೆಯಂಡ ಕಟ್ಟಿಕುಶಾಲಪ್ಪ, ಪಾಲಂದಿರ ಮಂದಣ್ಣ, ಬೊಳಕಾರಂಡ ನಾಣಯ್ಯ, ಚೆರುಮಂದಂಡ ಗಾಂಧಿ, ಪಾರಾಣೆ ವಿಎಸ್‍ಎಸ್‍ಎನ್ ವ್ಯವಸ್ಥಾಪಕ ಬೊಳಕಾರಂಡ ಮಂಜು ಮಾಚಯ್ಯ, ಬಿದ್ದಂಡ ಸಂದೀಪ್, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತೆ ಪಾರಾಣೆ ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಜನಿ ಎ.ಜಿ. ಸಹಶಿಕ್ಷಕರು ಪಾರಾಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಂತಿಬೈರ, ಸಹಶಿಕ್ಷಕರು, ಆಡಳಿತ ಮಂಡಳಿ ಸರ್ವಸದಸ್ಯರು, ದತ್ತಿನಿಧಿ ದಾನಿಗಳು, ಪಾರಾಣೆ ಕೇಂದ್ರ ಕ್ರೀಡಾಮಂಡಳಿಗೆ ಒಳಪಟ್ಟ ಕೊಣಂಜ ಗೇರಿ, ಕೈಕಾಡು, ಕಿರುಂದಾಡು, ಬಾವಲಿ, ಹಾಗೂ ಬಲಮುರಿ ಗ್ರಾಮದ ಕ್ರೀಡಾಭಿಮಾನಿಗಳÀು ಉಪಸ್ಥಿತರಿದ್ದರು. ಶಿಕ್ಷಕಿ ಡಯಾನ ಪಿ.ಎಂ. ಪ್ರಾರ್ಥಿಸಿ, ಕಾರ್ಯಕ್ರಮದಲ್ಲಿ ಶಿಕ್ಷಕಿ ಮಮತ ಸಿ.ಕೆ. ಸ್ವಾಗತಿಸಿ, ಮಾತಂಡ ಸೋಮಣ್ಣ ನಿರೂಪಿಸಿ, ಕಾರ್ಯದರ್ಶಿ ದೇವಜನ ರವÉÀುೀಶ್ ವಂದಿಸಿದರು.

-ದುಗ್ಗಳ ಸದಾನಂದ