ಸೋಮವಾರಪೇಟೆ, ಅ.31: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ಕರೆ ನೀಡಿದ್ದ ಸ್ಟುಡಿಯೋ ಬಂದ್‍ಗೆ ಸೋಮವಾರಪೇಟೆ ಪಟ್ಟಣದ ಸ್ಟುಡಿಯೋ ಮಾಲೀಕರು ಬೆಂಬಲ ನೀಡಿದರು.

ಕಾರ್ಮಿಕ ಇಲಾಖೆಗೆ ಛಾಯಾಗ್ರಾಹಕರನ್ನು ಒಳಪಡಿಸಬೇಕು. ಸರ್ಕಾರಿ ಯೋಜನೆಯ ಫೋಟೋಗಳನ್ನು ತೆಗೆಯಲು ವೃತ್ತಿಪರ ಛಾಯಾಗ್ರಾಹಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ರಾಜ್ಯದಲ್ಲಿ ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ಸಂಘ ಕರೆ ನೀಡಿದ್ದ ಬಂದ್‍ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂತು.

ಸೋಮವಾರಪೇಟೆ ಛಾಯಾಚಿತ್ರಗಾರರ ಸಂಘದ ಅಧ್ಯಕ್ಷ ಚಂದನ ಸುಬ್ರಮಣಿ, ಕಾರ್ಯದರ್ಶಿ ಡೇವಿಡ್, ಖಜಾಂಚಿ ಸುದೀಪ್, ಉಪಾಧ್ಯಕ್ಷ ಧರ್ಮಪ್ಪ, ಜಿಲ್ಲಾ ಉಪಾಧ್ಯಕ್ಷ ಜನಾರ್ಧನ್, ನಿರ್ದೇಶಕ ವಸಂತ್ ಸೇರಿದಂತೆ ಇತರರು, ಸಂಘದ ವತಿಯಿಂದ ಮುಂದಿಟ್ಟಿರುವ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕೆಂದು ಒತ್ತಾಯಿಸಿದರು.