ಮಡಿಕೇರಿ, ಅ. 31: ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು ವತಿಯಿಂದ ದೀಪಾವಳಿ ವಿಶೇಷ ಸ್ಪರ್ಧೆ ‘ಛಂದೋಬದ್ಧ’ ಸಂವರ್ಧಕ ಪರಿಷತ್ತಿನ ಗುರು ಶರ್ಮ ಅವರ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದೆ.
ಮೊದಲ ಮೂರು ಬಹುಮಾನಿತರಿಗೆ ಕ್ರಮವಾಗಿ ರೂ. 1,000, ರೂ. 600, ರೂ. 400 ಹಾಗೂ ಹತ್ತು ಪ್ರೋತ್ಸಾಹಕರ ಬಹುಮಾನ ರೂ. 100 ನಗದು ಬಹುಮಾನದೊಂದಿಗೆ ಇ-ಪ್ರಶಂಸಾ ಪತ್ರವನ್ನು ನೀಡಲಾಗುತ್ತದೆ. ತಮ್ಮ ಕಾವ್ಯದಲ್ಲಿ ಪ್ರಣತಿ ಎಂಬ ಪದವನ್ನು ಹದಿನೆಂಟು ಸಾಲುಗಳಲ್ಲಿ ಎಲ್ಲಿಯಾದರೂ ಬಳಸಿರಬೇಕು. ನವೆಂಬರ್ 10 ರ ರಾತ್ರಿ 9 ಗಂಟೆಯೊಳಗೆ ಕವನಗಳನ್ನು vಚಿiಟeshಚಿಠಿsv@gmಚಿiಟ.ಛಿom ಗೆ ಕಳುಹಿಸಬೇಕಿದೆ.
ನವೆಂಬರ್ 16 ರ ಸೋಮವಾರ ಸಂಜೆ ಫಲಿತಾಂಶ ನೀಡಲಾಗುವುದು. ಕಾವ್ಯಗಳು ಕಡ್ಡಾಯವಾಗಿ ಭಾಮಿನೀ ಷಟ್ಪದಿಯಲ್ಲಿ 18 ಸಾಲುಗಳಲ್ಲಿ ಇರತಕ್ಕದ್ದು ಎಂದು ಮನೆ ಮನೆ ಕವಿಗೋಷ್ಠಿ ಸಂವರ್ಧಕ ಪರಿಷತ್ತು ಬಳಗದ ಸಂಸ್ಥಾಪಕ ಮತ್ತು ಸಂಚಾಲಕ ವೈಲೇಶ್ ಪಿ.ಎಸ್. ತಿಳಿಸಿದ್ದಾರೆ.