ಮಡಿಕೇರಿ, ಅ. 31: ಶ್ರೀಮಂಗಲನಾಡ್ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ವತಿಯಿಂದ ಸದಸ್ಯರಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಿಳುವಳಿಕೆ ನೀಡಲು ವೆಬಿನಾರ್ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆಪ್ತಸಮಾಲೋಚಕಿ, ಮಾನಸಿಕ ತಜ್ಞೆ ಬೆಂಗಳೂರಿನ ಕಂಗಾಂಡ ಸಿಂಧೂರ ಅಯ್ಯಪ್ಪ ಅವರು ಈ ಬಗ್ಗೆ ಸವಿವರವಾದ ಮಾಹಿತಿಯ ಮೂಲಕ ಜಾಗೃತಿ ಮೂಡಿಸಿದರು. ಪರಿಷತ್‍ನ ಅಧ್ಯಕ್ಷೆ ಕಟ್ಟೇರ ಸುಶೀಲಾ ಅಚ್ಚಪ್ಪ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ಈ ವೆಬಿನಾರ್ ಕಾರ್ಯಕ್ರಮದಲ್ಲಿ ಶ್ರೀಮಂಗಲನಾಡ್ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಸದಸ್ಯರೊಂದಿಗೆ ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಡಾ. ಕಟ್ಟೇರ ಸಂಧ್ಯಾ ಪೂಣಚ್ಚ ಸ್ವಾಗತಿಸಿ, ಸಿಂಧೂರ ಅಯ್ಯಪ್ಪ ಪರಿಚಯಿಸಿದರು. ಮಚ್ಚಾಮಾಡ ರೇಷ್ಮ ವಿಜಯ್ ವಂದಿಸಿದರು.