ಮಡಿಕೇರಿ, ಅ. 30: ನಗರದ ಜಾಮಿಯಾ ಮಸೀದಿಯಲ್ಲಿ ಕಳೆದ ರಾತ್ರಿ ಈದ್‍ಮಿಲಾದ್ ಆಚರಣೆ ನಡೆಯಿತು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಸಾದ ವಿನಿಯೋಗ ನೆರವೇರಿತು. ಮುಫ್ತಿ ಮೊಹಮದ್ ತಫೀರ್ ರಜಾಕ್ ಖಾದಿಯವರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ಮಂಗಳೂರಿನ ದಾವತೆ ಇಸ್ಲಾಮಿಯ ಮೊಹಮದ್ ರಫೀಕ್ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು.

ನಾಪೋಕ್ಲು: ಸಮೀಪದ ಚೆರಿಯಪರಂಬುವಿನ ಮುಹಿಯುದ್ದೀನ್ ಜಮಾಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಮಸೀದಿಯ ಖತೀಬರಾದ ಖಾತಿಮ್ ತಂಞಳ್ ಅವರ ನೇತೃತ್ವದಲ್ಲಿ ಮಸೀದಿಯಲ್ಲಿ ಮೌಲೂದ್ ಪಾರಾಯಣ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಪ್ರಸಾದ ಹಂಚಲಾಯಿತು. ಈ ಸಂದರ್ಭ ಮಸೀದಿಯ ಮೌಲ್ವಿಗಳು, ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎ. ಹ್ಯಾರಿಸ್ ಪ್ರಧಾನ ಕಾರ್ಯದರ್ಶಿ ಪರದಂಡ ಸಿರಾಜ್, ಆಡಳಿತ ಮಂಡಳಿಯ ಸದಸ್ಯರು ಗ್ರಾಮಸ್ಥರು ಹಾಜರಿದ್ದರು. ಮಧ್ಯಾಹ್ನ ಅನ್ನದಾನ ನೆರವೇರಿತು.

ಸಿದ್ದಾಪುರ : ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1495 ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಸರಳವಾಗಿ ನಡೆಯಿತು. ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಮುಸ್ತಫಾ ಹಾಜಿ ಮದರಸ ವಿದ್ಯಾರ್ಥಿಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಮದ್ರಸ ವಿದ್ಯಾರ್ಥಿಗಳ ಧಾರ್ಮಿಕ ಕಾರ್ಯಕ್ರಮ ಹಾಗೂ ಬುರ್ದಾ ಮಜ್ಲಿಸ್ ಗಮನ ಸೆಳೆಯಿತು. ಈ ಸಂದರ್ಭ ಸಿದ್ದಾಪುರ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಇಸ್ಮಾಯಿಲ್, ಕಾರ್ಯದರ್ಶಿ ರವೂಫ್ ಹಾಜಿ, ಸಮಿತಿಯ ಪ್ರಮುಖರಾದ ಅಸ್ಕರ್, ಕರೀಂ, ಸಮೀರ್, ನಜೀರ್, ಮದರಸ ಮುಖ್ಯಾಧ್ಯಾಪಕ ಆರಿಫ್ ಫೈಝಿ, ಅಧ್ಯಾಪಕರುಗಳಾದ ಹನೀಫ್, ಮೋಹಿದೀನ್, ಯುಸೂಫ್, ಕರೀಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

*ಕೊಡ್ಲಿಪೇಟೆ: ಕೊಡ್ಲಿಪೇಟೆಯ ಹ್ಯಾಂಡ್‍ಪೆÇೀಸ್ಟ್‍ನಲ್ಲಿರುವ ಮಸ್ಜಿದುನ್ನೂರ್ ಮದರಸದಲ್ಲಿ ಪ್ರವಾದಿ ಜನ್ಮ ದಿನದ ಪ್ರಯುಕ್ತ ಈದ್-ಮಿಲಾದ್ ಕಾರ್ಯಕ್ರಮ ವನ್ನು ಸರಳವಾಗಿ ಆಚರಿಸಲಾಯಿತು. ಪ್ರವಾದಿ ಅವರು ಜನ್ಮ ತಳೆದ ಮುಂಜಾನೆಯ ಸಮಯದಲ್ಲಿ ಪ್ರವಾದಿ ಕೀರ್ತನೆಗಳನ್ನು ಆಲಾಪಿಸಿ ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಸ್ಜಿದುನ್ನೂರ್ ಆಡಳಿತ ಸಮಿತಿ ಅಧ್ಯಕ್ಷ ಡಿ.ಎ .ಸುಲೈಮಾನ್, ಸಲಹಾ ಸಮಿತಿ ಅಧ್ಯಕ್ಷÀ ಜಿ.ಎಂ.ಅಬೂಬಕ್ಕರ್ ಹಾಜಿ, ಸದಸ್ಯರುಗಳಾದ ಕೆ.ಎಸ್.ಮಹಮ್ಮದ್ ಹಾಜಿ, ಮಹಮ್ಮದಾಲಿ ಮೇಸ್ತ್ರಿ, ಮಸ್ಜಿದುನ್ನೂರ್ ಮುಖ್ಯ ಗುರುಗಳಾದ ಹಾರೀಸ್ ಬಾಖವಿ, ರಝಾಕ್ ಫೈಝಿ, ಝಹೀರ್ ನಿಜಾಮಿ, ರಶೀದ್ ಆಮೀನಿ, ಸಮೀರ್ ಸಖಾಫಿ, ಮಹಮ್ಮದ್ ಪಾಳಿಲಿ, ಆಡಳಿತ ಸಮಿತಿ ಕಾರ್ಯದರ್ಶಿ ಮಹಮ್ಮದ್ ಹನೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುಂಟಿಕೊಪ್ಪ: ಇಲ್ಲಿನ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಈದ್ ಮಿಲಾದ್‍ನ್ನು ಸರಳ ರೀತಿಯಲ್ಲಿ ಆಚರಿಸಿದರು. ಸುಂಟಿಕೊಪ್ಪ ಪಟ್ಟಣದಲ್ಲಿರುವ ಸುನ್ನಿ ಮುಸ್ಲಿಂ ಜಮಾಅತ್, ಸುನ್ನಿಶಾಫಿ ಜುಮ್ಮ ಮಸೀದಿ, ನೂರಲ್ ಜುಮಾ ಮಸ್ಜೀದ್ ಗದ್ದೆಹಳ್ಳ ಹನಫಿ ಜಮಾಅತ್ ಮದ್ರಸಗಳಾದ ಮುನವ್ವರಲ್ ಇಸ್ಲಾಂ ಮದ್ರಸ, ಖತೀಜ ಉಮ್ಮ ಮದ್ರಸ, ನೂರಿಯ ಮದ್ರಸ, ಹನಫಿ ಮದ್ರಸಗಳಲ್ಲಿ ಮುಸ್ಲಿಂ ಜಮಾಅತ್ ಸುನ್ನಿ ಶಾಫಿ ಜುಮಾ ಮಸೀದಿಗಳಲ್ಲಿ ಪ್ರಾರ್ಥನೆ ನೆರವೇರಿತು.

ಈ ಸಂದರ್ಭ ಧರ್ಮಗುರುಗಳಾದ ಉಸ್ಮಾನ್ ಫೈಜಿ ಸಿ.ಎಂ.ಹಮೀದ್ ಮೌಲವಿ, ಮಸೀದಿ ಅಧ್ಯಕ್ಷÀ ಹಸನ್ ಹಾಜಿ, ಕಾರ್ಯದರ್ಶಿ ಎಸ್.ಎಂ.ಸೂಫಿ ಮೊಹ್ಮದ್ ರಫೀಕ್, ಕೆ.ಐ. ಶರೀಫ್ ಹಾಜರಿದ್ದರು.