ಕೂಡಿಗೆ, ಅ. 30 : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಸಮೀಪದಲ್ಲಿ ಹರಿಯುತ್ತಿರುª ಹಾರಂಗಿ ಬಲದಂಡೆ ನಾಲೆಯಲ್ಲಿ ಅದೇ ಗ್ರಾಮದ ತಿಮ್ಮ (19) ಎಂಬಾತ ದನ ಮೇಯಿಸುತ್ತಿದ್ದ. ನಾಲೆಯಲ್ಲಿ ಕೈಕಾಲು ತೊಳೆಯುಲು ಹೋದ ಸಂದರ್ಭ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ

ನಾಲೆಯ ಏರಿಯ ಮೇಲೆ ಜಮೀನಿಗೆ ತೆರಳುತ್ತಿದ್ದ ಗ್ರಾಮಸ್ಥರು ನೋಡುವಷ್ಟರಲ್ಲಿ ಈ ಯುವಕ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ಮೃತದೇಹ ನಾಲೆಯಲ್ಲಿ ಹೆಚ್ಚು ನೀರು ಹರಿಯುತ್ತಿರುವುದರಿಂದ ತೇಲಿಕೊಂಡು ಪಿರಿಯಾಪಟ್ಟಣ ತಾಲೂಕಿನ ಕರಡಿಲಕ್ಕನಕೆರೆಗೆ ಹೋಗಿರಬಹುದೆಂದು ಊಹಿಸಲಾಗಿದೆ. ವ್ಯಕ್ತಿಯನ್ನು ಹುಡುಕಲು ಹಾರಂಗಿ ನಾಲೆಯಲ್ಲಿ ನೀರನ್ನು ಸ್ಥಗಿತಗೊಳಿಸಲಾಯಿತು. ಆದರೂ ಪ್ರಕರಣ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ