ಕೂಡಿಗೆ, ಅ. 29: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2019-20 ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ನಡೆಸಿ ವಾರ್ಷಿಕ ಆದಾಯವಾಗಿ 22.96 ಲಕ್ಷ ರೂ ಲಾಭಾಂಶಗಳಿಸಿದ್ದು, ಪ್ರಗತಿಪರ ಯೋಜನೆಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಸಹಕಾರ ಸಂಘದ ಮೂಲಕ 2019-20 ಸಾಲಿನಲ್ಲಿ ಸದಸ್ಯರ ಪಾಲು ಬಂಡವಾಳವಾಗಿ 181.78 ಕೋಟಿ ಹೊಂದಿದ್ದು ಇದರಲ್ಲಿ ರೈತರಿಗೆ ಕೆ ಸಿ ಸಿ ಸಾಲವಾಗಿ 5 ಕೋಟಿ 40 ಲಕ್ಷದ 29 ಸಾವಿರ ನೀಡಿದೆ. ಇದರಲ್ಲಿ ಕೃಷಿ ಮಧ್ಯಮ ಅವಧಿ ಸಾಲವಾಗಿ 14.45 ಲಕ್ಷ ಜಾಮೀನು ಸಾಲವಾಗಿ 10.88. ಲಕ್ಷ ನಿರಖು ಠೇವಣಿ 4.53 ಲಕ್ಷ ಪಿಗ್ಮಿ ಠೇವಣಿ 17 ಲಕ್ಷ ಸ್ವ ಸಹಾಯ ಗುಂಪುಗಳಿಗೆ 14.75 ಲಕ್ಷ ಭವಿಷ್ಯ ನಿಧಿ ಗುಂಪಿಗೆ 6.81 ಲಕ್ಷ ಆಭರಣ ಸಾಲವಾಗಿ ಒಂದು ಕೋಟಿ 64 ಲಕ್ಷ 91 ಸಾವಿರ ಮತ್ತು ವ್ಯಾಪಾರ ಅಭಿವೃದ್ಧಿಗಾಗಿ ಸಾಲ 1 ಕೋಟಿ 60 ಲಕ್ಷ 56 ಸಾವಿರ ಕೋಟಿ ಜಂಟಿ ಭಾದ್ಯತಾ ಗುಂಪುಗಳಿಗೆ 7.50 ಲಕ್ಷ ಪಿಗ್ಮಿ ಸಾಮಾನ್ಯವಾಗಿ 7,51.29 ಕೋಟಿ ಅಸಾಮಿ ಸಾಲವಾಗಿ 6,71 ಲಕ್ಷ, ಗೊಬ್ಬರಕ್ಕೆ 6,84 ಲಕ್ಷ ವಿನಿಯೋಗಿಸಲಾಗಿದ್ದು.

ಒಟ್ಟು 16,89.69 ಕೋಟಿ ವ್ಯವಹಾರಗಳನ್ನು ನಡೆಸಲಾಗಿದೆ ಇದರಲ್ಲಿ ಸಂಘವು 22,96 ಲಕ್ಷರೂ ಲಾಭಾಂಶ ಗಳಿಸಿ ಸಂಘವು ಸಹಕಾರ ಸಂಘದ ಆಡೀಟ್ ತರಗತಿಯ ಸತತವಾಗಿ ಮೂರು ಬಾರಿಯಲ್ಲಿಯೂ ಎ ಸ್ಥಾನ ಪಡೆದು ಪ್ರಗತಿಯತ್ತ ಸಾಗುತ್ತಿದೆ. ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಸಂಘದ ವಾರ್ಷಿಕ ಮಹಾಸಭೆಯು ಮುಂದಿನ ನವೆಂಬರ್ ತಿಂಗಳ 8 ರಂದು ಸಂಘದ ರೈತ ಸಹಕಾರ ಭವನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಪಿ ಮೀನ ತಿಳಿಸಿದ್ದಾರೆ.