ನಾಪೆÇೀಕ್ಲು, ಅ. 29 : ಪಾಲೂರು ಗ್ರಾಮದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ಇಲ್ಲ. ಯಾರೋ ಕಿಡಿಗೇಡಿಗಳು ಗ್ರಾಮದ ಹೆಸರನ್ನು ಹಾಳು ಮಾಡಲು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದು ಇಂತವರ ವಿರುದ್ಧ ಊರಿನ ಜನರು ಎಚ್ಚರದಿಂದ ಇರಬೇಕೆಂದು ಗ್ರಾಮಸ್ಥರಾದ ಬೊಳ್ಳಿಯಂಡ ಹರೀಶ್ ಹೇಳಿದರು. ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾ, 28 ರಂದು ಗ್ರಾಮದ ಹೊಳೆಯಲ್ಲಿ ವಸಂತ ಎಂಬ ಕಾರ್ಮಿಕನೊಬ್ಬ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆಯನ್ನು ಯಾರೋ ಕಿಡಿಗೇಡಿಗಳು ಮರಳು ದಂಧೆಯಿಂದ ವಸಂತ ಸಾವನ್ನಪ್ಪಿದ್ದಾನೆ. ಇದನ್ನು ನಾಪೆÉÇೀಕ್ಲು ಪೊಲೀಸರು ಮುಚ್ಚಿ ಪ್ರಕರಣವನ್ನು ತಿರುಚಿದ್ದಾರೆ ಎಂದು ಹೇಳುತ್ತಿದ್ದು, ಇದು ಸತ್ಯವಲ್ಲ ಎಂದರು. ಪಾಲೂರಿನಲ್ಲಿ ಕಳೆದ ಒಂದು ವರ್ಷಗಳಿಂದ ಯಾವುದೇ ಭಾಗದಿಂದ ಅಕ್ರಮ ಮರಳನ್ನು ತೆಗೆಯುತ್ತಿಲ್ಲ ಎಂದ ಅವರು ವಸಂತ ಎಂಬವರು ರಸ್ತೆಯ ಕೆಲಸಕ್ಕೆ ಕಾಡು ಕಲ್ಲು ಸಾಗಿಸಲು ಬಂದು ಹೊಳೆಯಲ್ಲಿ ಕೈಕಾಲು ಮುಖ ತೊಳೆಯಲು ಹೋದ ಸಂದರ್ಭ ಕಾಲು ಜಾರಿ ಸಾವನ್ನಪ್ಪಿರುತ್ತಾನೆ ಎಂದು ಆತನ ಜೊತೆಯಲ್ಲಿದ್ದ ಕೃಷ್ಣ ಹೇಳಿಕೆ ನೀಡಿರುತ್ತಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಂದನೆರವಂಡ ನಂದ ಗಣಪತಿ ಮಾತನಾಡಿ ತಮ್ಮ ತೋಟಕ್ಕೆ ಹೋಗುವ ರಸ್ತೆ ಕೆಸರಿನಿಂದ ಕೂಡಿದ್ದು, ಗುಂಡಿಗಳನ್ನು ಮುಚ್ಚಲು ಕಾಡು ಕಲ್ಲುಗಳನ್ನು ಸಾಗಿಸಲು ಇಬ್ಬರು ಕೆಲಸದವರು ವಸಂತ ಮತ್ತು ಕೃಷ್ಣ ಎಂಬವರನ್ನು ಕರೆಸಿ ಅವರು ಜೀಪಿಗೆ ಕಲ್ಲು ತುಂಬಿಸಿ ಹೊಳೆಯಲ್ಲಿ ಕೈಕಾಲು ತೊಳೆಯಲು ಹೋದ ಸಂದರ್ಭ ವಸಂತ ಕಾಲು ಜಾರಿ ಹೊಳೆಗೆ ಬಿದ್ದಿರುತ್ತಾನೆಂದು ಜೊತೆಗಾರ ಹೇಳಿದ್ದಾರೆ. ಇದನ್ನು ಮರಳು ದಂಧೆ ಎಂದರೆ ಹೇಗೆ ಎಂದರು.

ನಾಪೆÉÇೀಕ್ಲು ಭಜರಂಗ ದಳದ ಅಧ್ಯಕ್ಷ ಬಿ.ಎಂ. ಪ್ರತೀಪ್ ಮಾತನಾಡಿ ಯಾರೋ ಕಿಡಿಗೇಡಿಗಳು ಪೊಲೀಸರಿಗೆ ಮತ್ತು ಗ್ರಾಮಕ್ಕೆ ಕೆಟ್ಟ ಹೆಸರನ್ನು ತರಲು ಮಾಡಿದ ಹುನ್ನಾರವಾಗಿದೆ ಇಂತವರ ವಿರುದ್ಧ ಊರಿನವರು ಜಾಗೃತರಾಗಬೇಕು ಇಂತಹ ಹೇಳಿಕೆ ನೀಡಿದವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದರು.

ಪತ್ರಿಕಾ ಗೋಷ್ಠಿಯಲ್ಲಿ ಪಾಲೂರು ಹರಿಶ್ಚಂದ್ರ ದೇವಳದ ಅರ್ಚಕ ಕಿರಣ್ ಕುಮಾರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಚೆರುವಳಂಡ ನೀರನ್ ನಂಜಪ್ಪ ಇದ್ದರು.