ಮಡಿಕೇರಿ, ಅ. 29: ಜಾತ್ಯಾತೀತ ಜನತಾದಳ ವೀರಾಜಪೇಟೆ ತಾಲೂಕು ಘಟಕದಿಂದ ಕಾಕೋಟುಪರಂಬು, ಬೊಳ್ಳುಮಾಡು ಇತರ ಪ್ರದೇಶಗಳಿಗೆ ತೆರಳಿ ಕಾಲೋನಿಗಳಲ್ಲಿರುವ ಬಡವರಿಗೆ ಉಚಿತವಾಗಿ 1000 ಮಾಸ್ಕ್‍ಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ನೇತೃತ್ವ ವಹಿಸಿದ್ದ ತಾಲೂಕು ಘಟಕದ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ ಜಿಲ್ಲಾ ಜೆಡಿಎಸ್‍ನಿಂದ ಈಗಾಗಲೇ ಸಾವಿರಾರು ಕಿಟ್‍ಗಳನ್ನು ವಿತರಿಸಲಾಗಿದ್ದು, ವೀರಾಜಪೇಟೆ ತಾಲೂಕಿನಲ್ಲಿ ಜಾತ್ಯಾತೀತ ಜನತಾದಳದ ತಾಲೂಕು ಘಟಕದಿಂದ 25000 ಮಾಸ್ಕ್‍ಗಳನ್ನು ಉಚಿತವಾಗಿ ನೀಡಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಹಂತ-ಹಂತವಾಗಿ ಎಲ್ಲಾ ಕಾಲೋನಿಗಳಿಗೆ ತೆರಳಿ ಜಾಗೃತಿ ಮೂಡಿಸಿ ಉಚಿತವಾಗಿ ಮಾಸ್ಕ್‍ಗಳನ್ನು ನೀಡಲಾಗುವುದು ಎಂದು ಹೇಳಿದರು.

ಜೆಡಿಎಸ್ ಮುಖಂಡರುಗಳಾದ ಪಂದ್ಯಂಡ ರವಿ ಮಾದಪ್ಪ, ಅಪ್ಪಡೇರವಂಡ ಸನ್ನೂ, ದುಶ್ಯಂತ್ ರೈ, ಕುಯಿಮಂಡ ರಾಕೇಶ್ ಬಿದ್ದಪ್ಪ, ಬಾಳೆಕೊಟ್ಟಿರ ದಿನಿ, ಮಾತಂಡ ರೇನು, ಎಂ.ಸಿ. ವಿನೋದ್, ಕೊಪ್ಪಿರ ದೇವಯ್ಯ, ಚಿಲ್ಲವಂಡ ಗಣಪತಿ, ಎಂ.ಕೆ. ಚಿಟ್ಟಿಯಪ್ಪ ಮತ್ತು ಕುಯಿಮಂಡ ಲೋಕೇಶ್ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.