ಕೂಡಿಗೆ, ಅ. 29 : ರಾಜ್ಯದಲ್ಲಿ ಗ್ರಾಮ ಪಂಚಾಯತಿ ಅಧಿಕಾರ ಅವಧಿ ಮುಗಿದು ಈಗಾಗಲೇ ಎಂಟು ತಿಂಗಳುಗಳು ಕಳೆದಿದೆ ಮುಂದಿನ ಚುನಾವಣೆ ಸ್ಪಂದಿಸುವ ಆಕಾಂಕ್ಷೆಯ ಅಭ್ಯರ್ಥಿಗಳು ತಮ್ಮ-ತಮ್ಮ ವಾರ್ಡ್‍ನ ಸ್ಥಳಗಳಿಗೆ ತೆರಳಿ ನಾನು ಈ ಬಾರಿಯ ಗ್ರಾಮ ಪಂಚಾಯತಿ ಅಭ್ಯರ್ಥಿ ಎಂಬುದಾಗಿ ಹೇಳುತ್ತಾರೆ ಇದರ ಜೊತೆಯಲ್ಲಿ ಹಳ್ಳಿಯ ರಾಜಕೀಯ ಗರಿಗÉದರುತ್ತಿದೆ. ಗ್ರಾಮ ಪಂಚಾಯತಿ ಚುನಾವಣೆ ನೆಡೆಸಲು ಈಗಾಗಲೇ ರಾಜ್ಯ ಚುನಾವಣಾ ಆಯೋಗ ಸಿದ್ಧವಾಗಿ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಚುನಾವಣೆ ನೆಡೆಸುವ ವ್ಯವಸ್ಥೆಯ ಶೇಕಡಾ 90 ರಷ್ಟು ಕಾರ್ಯ ನಿರ್ವಹಿಸಿದೆ. ಅದರಂತೆ ಕೊಡಗು ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನೆಡೆಸಲು ಜಿಲ್ಲಾಡಳಿತ ಸಿದ್ಧತೆಯಲ್ಲಿ ತೊಡಗಿದೆ. ಕೊರೊನಾ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯನ್ನು ಮುಂದೂಡುವಂತೆ ಕೆಲ ರಾಜಕೀಯ ಪಕ್ಷಗಳು ಒತ್ತಾಯ ತಂದರೂ ನ್ಯಾಯಾಲಯದ ಆದೇಶದಂತೆ ಈ ವಾರ್ಷಿಕ ಅವಧಿಯಲ್ಲಿ ಗ್ರಾಮ ಪಂಚಾಯತಿಯ ಚುನಾವಣೆ ನಡೆಯುವ ತೀರ್ಮಾನ ವಾಗಿರುವುದರಿಂದ. ಹಳ್ಳಿಯ ವಾರ್ಡ್‍ಗಳ ರಾಜಕೀಯ ಪ್ರಾರಂಭವಾಗಿದೆ.