ವೀರಾಜಪೇಟೆ, ಅ. 29 : ವೀರಾಜಪೇಟೆ ತಾಲೂಕಿನ ಚಾಮಿಯಾಲದ ಎಸ್‍ಕೆಎಸ್‍ಎಸ್‍ಎಫ್ ಶಾಖೆ ವತಿಯಿಂದ ಮಿಲಾದ್ ಕಿಟ್ ವಿತರಿಸಲಾಯಿತು. "ನೆರೆಮನೆಯವರು ಹಸಿದಿರುವಾಗ ತನ್ನ ಹೊಟ್ಟೆಯನ್ನು ತುಂಬಿಸುವವನು ನನ್ನವನಲ್ಲ" ಎಂಬ ಪ್ರವಾದಿ ಮುಹಮ್ಮದ್ (ಸ ಅ) ಅವರ ಪವಿತ್ರ ವಾಕ್ಯದೊಂದಿಗೆ ಕೊರೊನಾ ಸಂದರ್ಭದಲ್ಲಿ ಎಸ್‍ಕೆಎಸ್‍ಎಸ್‍ಎಫ್ ಚಾಮಿಯಾಲ ಶಾಖೆಯ ವತಿಯಿಂದ ಮೀಲಾದ್ ಕಿಟ್ಟನ್ನು ಸುಮಾರು ಇಪ್ಪತೈದು ಕುಟುಂಬಕ್ಕೆ ವಿತರಿಸಿದ್ದೇವೆ ಎಂದು ಸಂಘಟನೆಯವರು ತಿಳಿಸಿದರು. ಶಾಖೆಯ ಅಧ್ಯಕ್ಷ ನಝೀರ್ ಕೆ. ಎಮ್. ನಿರ್ದೇಶಕರಾದ ಅಬ್ದುಲ್ ಘನಿ, ಮಜೀದ್, ರಶೀದ್ ಮತ್ತು ಪ್ರಮುಖರಾದ ಅಲ್ತಾಫ್, ಉಸ್ಮಾನ್, ನೌಶಾದ್, ಶಫೀಕ್, ನಿಜಾಮುದ್ದೀನ್, ರಿಯಾಝ್, ಶಮೀಮ್, ಇಷಾಕ್ ಇನ್ನಿತರರು ಇದ್ದರು.