ಕುಶಾಲನಗರ, ಅ. 29 : ರೋಟರಿ ಕುಶಾಲನಗರ ವತಿಯಿಂದ ಇಂಜಿನಿಯರ್ಸ್ ದಿನವನ್ನು ಆಚರಿಸ ಲಾಯಿತು. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವುದರೊಂದಿಗೆ ಸತತವಾಗಿ ಮೂರು ವರ್ಷಗಳ ನೆರೆಯ ಸಂದರ್ಭ ಕರ್ತವ್ಯ ನಿಭಾಯಿಸಿದ ಕುಶಾಲನಗರ ಸೆಸ್ಕ್‍ನ ಅಸಿಸ್ಟೆಂಟ್ ಇಂಜಿನಿಯರ್ ವಿನಯ್‍ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ರೋಟರಿ ಅಧ್ಯಕ್ಷ ಕೆ.ಪಿ.ಚಂದ್ರಶೇಖರ್, ಕಾರ್ಯದರ್ಶಿ ಉಲ್ಲಾಸ್ ಕೃಷ್ಣ, ಪ್ರಮುಖರಾದ ಡಾ.ಹರಿಶೆಟ್ಟಿ, ಎಂ.ಡಿ.ರಂಗಸ್ವಾಮಿ ಇದ್ದರು.