ಮಡಿಕೇರಿ, ಅ. 29 : ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವ ವಿಶೇಷಚೇತನರು ಮತ್ತು ಹಿರಿಯ ನಾಗರಿಕರು ಕಾರಣಾಂತರಗಳಿಂದ ಪಿಂಚಣಿ ನಿಂತಿದ್ದಲ್ಲಿ ಸ್ವ-ವಿವರ ಮಾಹಿತಿಯನ್ನು ಆಯಾಯ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಗಮನಕ್ಕೆ ತರಲು ಸೂಚಿಸಿದೆ. ಒಂದು ವೇಳೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಹುದ್ದೆ ಖಾಲಿಯಿರುವ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳು ಆಯಾಯ ತಾಲೂಕು ಪಂಚಾಯಿತಿಯಲ್ಲಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ಗಮನಕ್ಕೆ ದೂರವಾಣಿ ಮೂಲಕ ವಿವರಗಳನ್ನು ನೀಡುವುದು.
ಮಡಿಕೇರಿ ತಾಲೂಕಿಗೆ ರಾಜೇಶ್ವರ್ 8073192914, ವೀರಾಜಪೇಟೆ ತಾಲೂಕಿಗೆ ಪ್ರಥನ್ ಕುಮಾರ್ ಸಿ.ಬಿ 9008685129 ಮತ್ತು ಸೋಮವಾರಪೇಟೆ ತಾಲೂಕಿಗೆ ಹರೀಶ್ ಟಿ.ಆರ್. 9900883654 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.