ಕೂಡಿಗೆ, ಅ. 29: ಕೂಡಿಗೆ ಗ್ರಾಮ ಪಂಚಾಯತಿಯಲ್ಲಿ ಕಳೆದ ಹತ್ತು ತಿಂಗಳಿಂದ. ಅಭಿವೃದ್ಧಿ ಅಧಿಕಾರಿ ನೇಮಕ ಆಗಿಲ್ಲ. ಈ ಸ್ಥಾನ ವನ್ನು ನೂತನವಾಗಿ ನೇಮಕ ಗೊಂಡಿರುವ ಕಾರ್ಯದರ್ಶಿ ವಹಿಸಿಕೊಂಡಿದ್ದಾರೆ.
ಪಂಚಾಯಿತಿಯು ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚು ಒತ್ತು ನೀಡದೆ ಅನುಷ್ಠಾನ ಗೊಂಡಿರುವ ಪ್ರಮುಖವಾದ ಗ್ರಾಮದ ಕಾಮಗಾರಿಗಳು ನೆಡೆಯದೆ ಜನರ ಸಮಸ್ಯೆಗಳನ್ನು ಕೇಳುವವ ರಿಲ್ಲದ ರೀತಿ ಆಗಿದೆ.
ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ಅಧಿಕಾರ ಮುಗಿದ ನಂತರ ದಿನಗಳಲ್ಲಿ ಅಧಿಕಾರಿಗಳ ಅಧಿಕಾರವಾದರೆ ಇದುವರೆಗೂ ಸಮರ್ಪಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ವಾರ್ಷಿಕ ಖರ್ಚು ವೆಚ್ಚದ ಲೆಕ್ಕಪತ್ರ ಮಂಡನೆಯ. ಜಮಾಬಂದಿ ಕಾರ್ಯಕ್ರಮ ಇದುವರೆಗೂ ನಡೆದಿಲ್ಲ.
ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಒಂದು ಕೋಟಿ ಹಣ ಸರಕಾರದಿಂದ ಗ್ರಾಮ ಪಂಚಾಯತಿಗೆ ಬಿಡುಗಡೆ ಆಗಿದ್ದರೂ, ಮಾಸಿಕ ಸಭೆಯಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿ ಗ್ರಾಮಸ್ಥರ ಬೇಡಿಕೆಯ ಅನುಗುಣವಾಗಿ ಕಾಮಗಾರಿಯನ್ನು ನಡೆಸಲು ಸೂಚನೆಯನ್ನು ನೀಡಿದರೂ ಸಹ ಇದುವರೆಗೂ ಅರ್ಧ ಭಾಗದಷ್ಟು ಕಾಮಗಾರಿಗಳು ನಡೆದಿವೆ.
ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ರುವ ಕಸ ವಿಲೇವಾರಿ ಘಟಕ ವನ್ನು ಪ್ರಾರಂಭ ಮಾಡಲು ಅನೇಕ ಎಡರು-ತೊಡರುಗಳು ಎದುರಾಗಿವೆ.
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಮನಬಂದಂತೆ ನಡೆಸಿದ್ದು, ಆಗಬೇಕಾಗಿರುವ ಕೆಲಸಗಳು ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆ.ಕೆ. ನಾಗರಾಜಶೆಟ್ಟಿ