ಕೂಡಿಗೆ, ಅ. 27: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಚಿಲ್ಲನ ಲತಾ ಗಣಿಪ್ರಸಾದ್ ಆಯ್ಕೆಗೊಂಡಿದ್ದಾರೆ. ಸಂಘದ ಕುಶಾಲನಗರ ಬ್ಲಾಕ್‍ನ ಮಹಿಳಾ ಮೀಸಲು ಸ್ಥಾನದಿಂದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಕುಶಾಲನಗರ ಬ್ಲಾಕ್ ಮಹಿಳಾ ವಿಭಾಗದ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆ ಚಿಲ್ಲನ ಲತಾ ಗಣಿಪ್ರಸಾದ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.