ಮುಳ್ಳೂರು, ಅ. 26: ಕರ್ನಾಟಕ ದಲಿತ ಸಂಘರ್ಷ ಸಮಿತಿ ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ಶನಿವಾರಸಂತೆ ಪಟ್ಟಣದ ಬಸಪ್ಪ ಕಲ್ಯಾಣ ಮಂಟಪದಲ್ಲಿ ತಾಲೂಕು ಮಟ್ಟದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಂಡ್ಯದ ಅಂಬೇಡ್ಕರ್ ವಾದಿ ಪ್ರಭುಸ್ವಾಮಿ ಮಾತನಾಡಿ, ಬಾಬ ಸಾಹೇಬ್ ಅಂಬೇಡ್ಕರ್ ಅವರು ಇಡೀ ಜಗತ್ತುಕಂಡ ಪ್ರತಿಭಾವಂತ. ವಿಶ್ವಕ್ಕೆ ಜ್ಞಾನದÀ ಬೆಳಕು ಚೆಲ್ಲಿದ ಮಹಾನ್ ನಾಯಕರಾಗಿದ್ದಾರೆ ಎಂದರು. ಅಂಬೇಡ್ಕರ್ ನಿರ್ಮಾಣದ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಎಲ್ಲಾ ರೀತಿಯ ಹಕ್ಕು ಅವಕಾಶಗಳಿವೆ. ಎಲ್ಲರೂ ಸಮಾನರು, ಪ್ರತಿಯೊಬ್ಬರೂ ವಿದ್ಯಾವಂತರಾಗುವ ಅವಕಾಶ ಹಾಗೂ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಲು ಅನುಕೂಲವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಶಾಲನಗರ ಡಿವೈಎಸ್‍ಪಿ ಎಚ್.ಎಂ. ಶೈಲೇಂದ್ರ, ನಮ್ಮ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೆ ಪ್ರತಿಯೊಬ್ಬರೂ ಗೌರವ ಕೊಡುವುದು ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದರು. ಮಕ್ಕಳು ಐಎಎಸ್, ಐಪಿಎಸ್, ಐಎಫ್‍ಎಸ್ ಮುಂತಾದ ನಮ್ಮ ದೇಶದ ಅತ್ಯುನ್ನತ್ತ ಮಟ್ಟದ ಪರೀಕ್ಷೆ ಬರೆದು ಅತ್ಯುನ್ನತ್ತ ಅಧಿಕಾರಿ ಗಳಾಗಿ ದೇಶದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುವಂತೆ ಸಲಹೆ ನೀಡಿದರು.

ದಸಂಸ ಜಿಲ್ಲಾ ಸಂಚಾಲಕ ಡಿ.ಜೆ. ಈರಪ್ಪ ಅಧ್ಯಕ್ಷತೆವಹಿಸಿದ ಸಮಾರಂಭದಲ್ಲಿ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಸಿ.ಸಿ. ಲೋಕೇಶ್, ಶನಿವಾರಸಂತೆ ಎಎಸ್‍ಐ ಗೋವಿಂದ್‍ರಾಜ್, ಪ್ರಮುಖರಾದ ಜಯಪ್ಪ ಹಾನಗಲ್, ಕುಮಾರ್, ದಿವಾಕರ್, ದೀಪಕ್, ಸೋಮಣ್ಣ, ನಿರ್ವಾಣಪ್ಪ, ಜಯೇಂದ್ರ, ಪುಟ್ಟಸ್ವಾಮಿ, ವಿಮಾಲಾಕ್ಷಿ, ರುಕ್ಕಮ್ಮ, ವೀರಭದ್ರ ಮುಂತಾದವರಿದ್ದರು. ಸಮಾರಂಭದಲ್ಲಿ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿ ಯರನ್ನು ಗೌರವಿಸಿ ಸನ್ಮಾನಿಸಲಾ ಯಿತು. ಈ ಸಂದರ್ಭ ಸಾಧಕ ಪತ್ರಕರ್ತರಾದ ಹೆಚ್.ಆರ್. ಹರೀಶ್‍ಕುಮಾರ್, ದಿನೇಶ್ ಮಾಲಂಬಿ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.