ಮಡಿಕೇರಿ, ಅ. 27: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರ ಫೇಸ್‍ಬುಕ್ ಖಾತೆಯಲ್ಲಿನ ಪೋಸ್ಟ್‍ಗಳಿಗೆ ಕೆಲವು ಅಪರಿಚಿತ ವ್ಯಕ್ತಿಗಳು ಅವಾಚ್ಯ ಶಬ್ಧಗಳಿಂದ ಕಮೆಂಟ್‍ಗಳನ್ನು ಮಾಡುತ್ತಿರುವ ಕುರಿತು ದೂರು ದಾಖಲಾಗಿದೆ.ಶಾಸಕ ರಂಜನ್ ಅವರ ಪ್ರವಾಸ ಕಾರ್ಯಕ್ರಮದ ಬಗ್ಗೆ ಅಗೌರವ ತರುವ ಕಮೆಂಟ್‍ಗಳು ಹಾಗೂ ಸುನಿಲ್ ಸುಬ್ರಮಣಿ ಅವರ ಫೇಸ್ ಬುಕ್ ಪೋಸ್ಟ್‍ಗಳಿಗೆ ‘ಲೆಪರ್ಡ್ 58 ಹಿಲ್ಸ್’, ‘ಟಿಪ್ಪು ಸುಲ್ತಾನ್’ ಹಾಗೂ ‘ಅಮ್ಮ ಕೊಡಗು’ ಎಂಬ ಹೆಸರುಗಳಲ್ಲಿ ಖಾತೆ ಹೊಂದಿರುವವರು ಅವಾಚ್ಯ ಶಬ್ಧಗಳನ್ನು ಬಳಸಿ ಕಮೆಂಟ್‍ಗಳನ್ನು ಮಾಡುತ್ತಿರುವುದಾಗಿ, ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.ರಂಜನ್ ಅವರ ಆಪ್ತ ಕಾರ್ಯದರ್ಶಿ ಆರ್.ಡಿ. ರವಿ ಮಡಿಕೇರಿಯಲ್ಲಿ ಹಾಗೂ ಸುನಿಲ್ ಅವರ ಆಪ್ತ ಕಾರ್ಯದರ್ಶಿ ಬಿ.ಎಸ್. ಪರಮೇಶ್ ಬೆಂಗಳೂರಿನಲ್ಲಿ ದೂರು ನೀಡಿದ್ದಾರೆ.