ವೀರಾಜಪೇಟೆ, ಅ. 27: ಅಶ್ಲೀಲ ವೀಡಿಯೋ ಸಿಡಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ವೀರಾಜಪೇಟೆ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವಂತೆ ನೂರ್ ವೀಡಿಯೋ ಸೆಂಟರ್‍ನ ಮಾಲೀಕ ನೂರ್ ಅಹಮ್ಮದ್ ಅಶ್ಲೀಲ ಸಿಡಿ ಮಾರಾಟ ಮಾಡಿ ಬಂಧನಕ್ಕೊಳಗಾದ ವ್ಯಕ್ತಿ. ನಗರದ ಹೃದಯ ಭಾಗದಲ್ಲಿ ಹಲವು ವರ್ಷಗಳಿಂದ ಈತ ಬೆಳ್ಳಿ ಪರದೆಗೆ ಬರಲು ಸಿದ್ಧವಾದ ಚಲನಚಿತ್ರಗಳು ಸೇರಿದಂತೆ ಹಳೆಯ ಚಲನಚಿತ್ರಗಳ ವೀಡಿಯೋ ಸಿಡಿಗಳನ್ನು ಮಾರುತ್ತಿದ್ದ.ಅಶ್ಲೀಲ ವೀಡಿಯೋ ಸಿಡಿ ಮಾರಾಟ : ಬಂಧನ (ಮೊದಲ ಪುಟದಿಂದ) ಈ ನಡುವೆ ಈತ ಕೆಲವು ನಿಗದಿತ ವ್ಯಕ್ತಿಗಳಿಗೆ ಗೌಪ್ಯವಾಗಿ ಅಶ್ಲೀಲ ಸಿಡಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಅನ್ವಯ ನಗರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದು, ಬಂಧಿತನಿಂದ 40 ಅಶ್ಲೀಲ ವೀಡಿಯೋ ಸಿಡಿಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ ನಿರ್ದೇಶನದಲ್ಲಿ ಪೊಲೀಸ್ ಉಪ ನಿರೀಕ್ಷಕ ರಸೂಲ್ ಸಾಬ್ ಗೌಂಡಿ, ಸಿಬ್ಬಂದಿಗಳಾದ ಗಿರೀಶ್, ಮುಸ್ತಫಾ, ಸಂತೋಷ್, ಮಧು, ಆನಂದ್ ಮತ್ತು ಚಾಲಕ ಯೋಗೇಶ್ ಕಾರ್ಯಾಚರಣೆಯಲ್ಲಿ ಭಾಗಿಗಳಾದರು.