ಮಡಿಕೇರಿ, ಅ. 26: ಕುಟುಂಬದಲ್ಲಿ ಒಬ್ಬರಿಗೆ ಕೋವಿಡ್ ಪಾಸಿಟಿವ್ ಆದರೆ ಉಳಿದವರು ಸಂತ್ರಸ್ತರನ್ನೇ ಬಿಟ್ಟು ಹೋಗುವ ಈ ಕಾಲದಲ್ಲಿ ಕೊರೊನಾ ಸೋಂಕು ತಗುಲಿದವರನ್ನು ಆಸ್ಪತ್ರೆಗೆ ತಲುಪಿಸುವ ಮೂಲಕ ಕೊನೆಗೆ ಮೃತರಾದರೆ ತನ್ನ ಮನೆಯ ಸಹೋದರ ಸಹೋದರಿಯರಂತೆ ಅಂತ್ಯ ಸಂಸ್ಕಾರ ನಡೆಸುತ್ತಿರುವ ತಂಡಗಳಲ್ಲಿ ಒಂದಾಗಿದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಎಸ್.ಡಿ.ಪಿ.ಐ. ಕೊಡಗು ಜಿಲ್ಲಾ ಸ್ವಯಂ ಸೇವಕರ ತಂಡ..

ಪಾಪ್ಯುಲರ್ ಫ್ರಂಟ್ ಹಾಗೂ ಎಸ್.ಡಿ.ಪಿ.ಐ.ನ ಸುಮಾರು 50ಕ್ಕೂ ಅಧಿಕ ಸ್ವಯಂ ಸೇವಕರ ತಂಡ ದೇಶದ ನಾನಾ ಭಾಗಗಲ್ಲಿ ಕೋವಿಡ್ ಮರಣ ಮೃದಂಗ ಬಾರಿಸುವ ವೇಳೆಯೇ ಕೊಡಗು ವೈದ್ಯಕೀಯ ಸಂಸ್ಥೆಗೆ ತಮ್ಮ ಸೇವೆಯ ಇಚ್ಛೆಯನ್ನು ತಿಳಿಸಿ ಸೂಕ್ತ ರೀತಿಯ ತರಬೇತಿಯನ್ನು ಪಡೆದುಕೊಂಡಿದ್ದರು.

ನಂತರದ ದಿನಗಳಲ್ಲಿ ಕೊಡಗಿನಲ್ಲಿಯೂ ಕೂಡ ಸಾವುಗಳು ಸಂಭವಿಸಲು ಶುರುವಾದ ನಂತರ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹಾಗೂ ಮೃತ ಕುಟುಂಬಸ್ಥರ ಸಹಕಾರದೊಂದಿಗೆ ಯಾವುದೇ ಪ್ರತಿಪಾಲಾಕ್ಷೆ ಹೊಂದದೆ ಸೂಕ್ತ ರೀತಿಯಲ್ಲಿ ಅಂತಿಮ ಸಂಸ್ಕಾರವನ್ನು ಮಾಡುತ್ತಲೇ ಬರುತ್ತಿದೆ..

ಕೊಡಗು ಜಿಲ್ಲೆಯಲ್ಲಿ ಈವರೆಗೆ 28 ಕೊರೊನಾ ಪೀಡಿತರ ಶವ ಸಂಸ್ಕಾರವನ್ನು ಪಾಪ್ಯುಲರ್ ಫ್ರಂಟ್ ಹಾಗೂ ಎಸ್.ಡಿ.ಪಿ.ಐ.ನ ಸ್ವಯಂ ಸೇವಕರ ಪಡೆ ಮಾಡಿದೆ ಇದರಲ್ಲಿ 25 ಮುಸ್ಲಿಂ, 2 ಕ್ರಿಶ್ಚಿಯನ್ ಹಾಗೂ 1 ಹಿಂದೂ ಸಹೋದರ ಸಹೋದರಿಯದ್ದಾಗಿರುತ್ತದೆ..

ಕೋವಿಡ್ ಆಸ್ಪತ್ರೆಯಲ್ಲಿ ಮರಣ ಸಂಭವಿಸಿದ ಮಾಹಿತಿ ಸಿಕ್ಕಿದ ಕೂಡಲೇ ಜಿಲ್ಲಾಡಳಿತ ಮತ್ತು ಮೃತ ಕುಟುಂಬದವರ ಸಹಕಾರದಿಂದ ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಸ್ಥಳದಲ್ಲಿ ಎಲ್ಲಾ ಮುನ್ನಚ್ಚರಿಕೆಯ ಕ್ರಮವನ್ನು ವಹಿಸಿಕೊಂಡು ಅಂತ್ಯಸಂಸ್ಕಾರ ಮಾಡುತ್ತಾ ಬಂದಿರುತ್ತಾರೆ ಹಾಗೂ ಮುಂದಿನ ದಿನಗಳಲ್ಲಿ ಕೂಡ ಮತ್ತಷ್ಟು ಸ್ವಯಂ ಸೇವಕರನ್ನು ಈ ಒಂದು ಕಾರ್ಯಕ್ಕೆ ಸಜ್ಜುಗೊಳಿಸುವತ್ತ ಸಂಘಟನೆ ಹೆಜ್ಜೆ ಇಟ್ಟಿದೆ..

ಎಲ್ಲಾ ಮೃತ ಶರೀರವನ್ನು ಅವರವರ ಧಾರ್ಮಿಕ ವಿಧಿ ವಿಧಾನಗಳ ಮೂಲಕವೇ ಸಂಸ್ಕಾರ ಮಾಡಲಾಗುತ್ತಿದೆ.

ಪ್ರಪಂಚದ ನಾನಾ ಭಾಗಗಳಲ್ಲಿ ಕೋವಿಡ್ ಸಾವುಗಳು ಸಂಭವಿಸುವಾಗಲೇ ಮುನ್ನೆಚ್ಚರಿಕೆ ಭಾಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಎಸ್.ಡಿ.ಪಿ.ಐ ಘಟಕವು ಅಗತ್ಯ ತರಬೇತಿಯನ್ನು ಪಡೆದುಕೊಂಡು ತಮ್ಮ ಕುಟುಂಬದ ಸಂಪರ್ಕವನ್ನು ಬಿಟ್ಟು ಸೇವಾರಂಗಕ್ಕೆ ಧುಮುಕಿದೆ. ಬಹುಪಾಲು ಅಂತ್ಯ ಸಂಸ್ಕಾರದ ಖರ್ಚುಗಳನ್ನು ಸಂಘಟನೆಯೇ ಭರಿಸುತ್ತಿದೆ.