ಸೋಮವಾರಪೇಟೆ, ಅ. 26: ತಾ. 20ರಂದು ನಿಧನರಾದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಹಾಗೂ ಪ್ರಗತಿಪರ ರೈತ ಒಕ್ಕೂಟದ ಅಧ್ಯಕ್ಷ ಮಾರುತಿ ಮಾನಪಡೆ ಅವರ ನಿಧನಕ್ಕೆ ಜಿಲ್ಲಾ ಗ್ರಾ.ಪಂ. ನೌಕರರ ಸಂಘದಿಂದ ಸಂತಾಪ ಸಭೆ ನಡೆಯಿತು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ, ಮಾರುತಿ ಮಾನಪಡೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ಮಾಡಲಾಯಿತು.

ಗ್ರಾ.ಪಂ. ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಸಂಘದ ತಾಲೂಕು ಅಧ್ಯಕ್ಷ ಹೆಚ್.ಜಿ. ನವೀನ್, ಕಾರ್ಯದರ್ಶಿ ವಿಜಯ, ಜಿಲ್ಲಾ ಪದಾಧಿಕಾರಿ ಗಳಾದ ಅಣ್ಣಪ್ಪ, ಬಾಬು, ಮಹಾಲಿಂಗ, ಸತೀಶ್, ಜವರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.