ಸೋಮವಾರಪೇಟೆ, ಅ. 27: ದುರ್ಗಾಷ್ಠಮಿ ಅಂಗವಾಗಿ ಪಟ್ಟಣದ ಬಸವೇಶ್ವರ ಹಾಗೂ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಿತು.

ದುರ್ಗಾಷ್ಟಾಮಿಯ ಅಂಗವಾಗಿ ಬಸವೇಶ್ವರ ದೇವಾಲಯದಲ್ಲಿ ಬೆಳಗಿನಿಂದ ವಿಶೇಷ ಪೂಜೆ,ಅರ್ಚನೆ ನಡೆಯಿತು. ದೇವಾಲಯದ ಅರ್ಚಕ ಮಿಥುನ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಸಂಜೆ ದುರ್ಗಾ ಹೋಮ ಹಾಗೂ ಚಂಡಿಕಾ ಹೋಮ ನಡೆಯಿತು. ರಾತ್ರಿ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.

ಸೋಮೇಶ್ವರ ದೇವಾಲಯದಲ್ಲಿ: ದುರ್ಗಾಷ್ಠಮಿ ಅಂಗವಾಗಿ ನಗರದ ಸೋಮೇಶ್ವರ ದೇವಾಲಯದಲ್ಲಿ ದುರ್ಗಾ ಹೋಮ ನಡೆಯಿತು. ದೇವಾಲಯದ ಅರ್ಚಕ ಚಿತ್ರಕುಮಾರ್ ಭಟ್ ನೇತೃತ್ವದಲ್ಲಿ ಅರ್ಚಕರ ತಂಡದಿಂದ ಹೋಮ, ಪೂರ್ಣಾಹುತಿ ನೆರವೇರಿತು. ದೇವಾಲಯದ ಶಕ್ತಿ ಪಾರ್ವತಿ ದೇವಿಗೆ ವಿಶೇಷ ಅಲಂಕಾರದೊಂದಿಗೆ ಅರ್ಚನೆ, ಅಷ್ಟೋತ್ತರ ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.