ಮಡಿಕೇರಿ, ಅ. 27: ಇಲ್ಲಿನ ದಾಸವಾಳ ಬೀದಿಯಲ್ಲಿರುವ ಮಡಿಕಟ್ಟೆಯ ಶ್ರೀ ವೀರಭದ್ರ-ಮುನೇಶ್ವರ ದೇಗುಲದಲ್ಲಿ ನವರಾತ್ರಿ ಪ್ರಯುಕ್ತ ಶಸ್ತ್ರಪೂಜೆ ಹಾಗೂ ದೇವಿಯ ವಿಶೇಷ ಆರಾಧನೆ ಜರುಗಿತು. ನವರಾತ್ರಿಯ ಒಂಭತ್ತು ದಿವಸ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ಜಾಗತಿಕ ಕೊರೊನಾ ನಡುವೆಯು ಸನ್ನಿಧಿಯ ಪರಿವಾರ ದೇವರೊಂದಿಗೆ, ದುರ್ಗಾರಾಧನೆ ಜರುಗುವುದರೊಂದಿಗೆ ಸದ್ಭಕ್ತರಿಗೆ ಮಹಾಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.

ಮಡಿವಾಳರ ಸಂಘದ ಹಿರಿಯರು ಹಾಗೂ ದೇವಾಲಯ ಸಮಿತಿಯ ಪ್ರಮುಖರು ಪಾಲ್ಗೊಂಡಿದ್ದರು. ಸಮಿತಿ ಅಧ್ಯಕ್ಷ ಪಿ.ಜಿ. ಸುಕುಮಾರ್ ಹಾಗೂ ದೇವಾಲಯದ ಪೂಜಾರಿ ಕಮನ್ ಸೇರಿದಂತೆ ಇತರರು ಪೂಜಾ ಕೈಂಕರ್ಯದ ನೇತೃತ್ವವನ್ನು ವಹಿಸಿದ್ದರು.