ಶ್ರೀಮಂಗಲ, ಅ. 26 : ದಕ್ಷಿಣ ಕೊಡಗಿನ ಬಿರುನಾಣಿ ಮತ್ತು ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ನಡುವೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ಕೂಟಿಯಾಲ ಸಂಪರ್ಕ ರಸ್ತೆಯಲ್ಲಿ ರೂ.70 ಲಕ್ಷ ವೆಚ್ಚದ ಸೇತುವೆ ನಿರ್ಮಾಣವಾಗಿದ್ದರೂ ಸಂಚಾರಕ್ಕೆ ತಡೆÉಯಾಗಿದ್ದು, ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇತ್ಯರ್ಥಪಡಿಸಿ ಯೋಜನೆ ಕಾರ್ಯಗತಗೊಳಿಸಲು ಪ್ರಯತ್ನ ನಡೆಸುವುದಾಗಿ ಕೆ.ಪಿ.ಸಿ.ಸಿ.ವಕ್ತಾರ, ಕಾನೂನು ಹಕ್ಕು ಮತ್ತು ಆರ್.ಟಿ.ಐ. ಘಟಕದ ಅಧ್ಯಕ್ಷರಾಗಿರುವ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಭರವಸೆ ನೀಡಿದರು. ಭಾನುವಾರ ಸಂಜೆ ಕೂಟಿಯಾಲ ಸಂಪರ್ಕ ರಸ್ತೆ ಹಾಗೂ ಸೇತುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಉಭಯ ಕಡೆಯ ಗ್ರಾಮಸ್ಥರು ಮಾಹಿತಿ ನೀಡಿ 8 ವರ್ಷದಿಂದ ಪ್ರಕರಣ ನ್ಯಾಯಾಲಯ ದಲ್ಲಿದೆ. ಅದಕ್ಕೆ ಮೊದಲು ಅರಣ್ಯ ಇಲಾಖೆಯಿಂದ ಮಾತ್ರ ಅಡ್ಡಿ ಇತ್ತು. ಕಡಮಕಲ್ಲು ರಸ್ತೆ ವಿವಾದವೇ ಬೇರೆಯಾಗಿದ್ದು, ಕೂಟಿಯಾಲ ರಸ್ತೆ ಯೋಜನೆಯನ್ನು ಕಡಮಕಲ್ ನೊಂದಿಗೆ ತಾಳೆ ಹಾಕಬಾರದೆಂದು ಸರಕಾರ ಮತ್ತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು, ಈ ಯೋಜನೆಯನ್ನು ಜನರ ಅನುಕೂಲ ಕ್ಕಾಗಿ ಕಾರ್ಯಗತ ಗೊಳಿಸಬೇಕೆಂದು ಪೊನ್ನಣ್ಣ ಅವರಲ್ಲಿ ಗ್ರಾಮಸ್ಥರು ಮನವಿ ಮಾಡಿಕೊಂಡರು.
(ಮೊದಲ ಪುಟದಿಂದ) ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಪ್ರಮುಖರಾದ ಕೊಲ್ಲೀರ ಬೋಪಣ್ಣ, ತೀತೀರ ಧರ್ಮಜಉತ್ತಪ್ಪ, ಅಣ್ಣಳಮಾಡ ಲಾಲಅಪ್ಪಣ್ಣ, ಕಡೆಮಾಡ ಜೋಯಪ್ಪ, ಕುಸುಮಾಜೋಯಪ್ಪ, ಕಾಳಿಮಾಡ ಪ್ರಶಾಂತ್, ಚೇರಂಡ ಮೋಹನ್‍ಕುಶಾಲಪ್ಪ, ಅಜ್ಜಿಕುಟ್ಟೀರ ನರೇನ್‍ಕಾರ್ಯಪ್ಪ, ಚಂದೂರ ರೋಹಿತ್, ತೀತಿಮಾಡ ಸದನ್, ತೀತಿಮಾಡ ಗಿಣಿ, ಕುಪ್ಪಣಮಾಡ ಪ್ರೀತಮ್, ಅಣ್ಣಳಮಾಡ ಹರೀಶ್, ಅಣ್ಣಳಮಾಡ ರಾಬಿನ್ ಮತ್ತು ಗ್ರಾಮಸ್ಥರು ಹಾಜರಿದ್ದರು.