ಸೋಮವಾರಪೇಟೆ, ಅ. 24: ಸೋಮವಾರಪೇಟೆ ಪೊಲೀಸ್ ಠಾಣೆಗೆ ನೂತನ ಠಾಣಾಧಿಕಾರಿಯಾಗಿ ಸಿ. ವಿನಯ್‍ಕುಮಾರ್ ಅವರನ್ನು ನೇಮಿಸಲಾಗಿದೆ. ಪ್ರೊಬೆಷನರಿ ಎಸ್.ಐ. ಆಗಿ ಕುಶಾಲನಗರ ಸೇರಿದಂತೆ ಜಿಲ್ಲೆಯ ಇತರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ವಿನಯ್‍ಕುಮಾರ್ ಅವರು ಸೋಮವಾರ ಪೇಟೆ ಠಾಣೆಯ ಠಾಣಾಧಿಕಾರಿಯಾಗಿ ಕರ್ತವ್ಯ ವಹಿಸಿಕೊಂಡಿದ್ದಾರೆ.