ಗೋಣಿಕೊಪ್ಪಲು, ಅ. 24: ರೈತರಿಗೆ ಅವಶ್ಯಕವಿರುವ ಜನರೇಟರ್‍ಗೆ ದುಪ್ಪಟ್ಟು ದರ ವಿದಿಸಿ ರೈತರಿಗೆ ವಂಚನೆ ಮಾಡಿರುವುದನ್ನು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಕೈಕೇರಿಯ ಶೋರೂಂ ಮುಂದೆ ಪ್ರತಿಭಟನೆ ನಡೆಯಿತು. ಅಂಗಡಿಯ ಮಾಲೀಕರು ಸ್ಥಳಕ್ಕೆ ಆಗಮಿಸಬೇಕು ರೈತರಿಂದ ಹೆಚ್ಚಾಗಿ ಪಡೆದಿರುವ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದರು.

ಜನರೇಟರ್ ಖರೀದಿಗೆ ರೈತರು ಆಗಮಿಸಿದ ಸಂದರ್ಭ ಅಂಗಡಿ ಮಾಲೀಕರು ನಿಗದಿತ ದರಕ್ಕಿಂತಲೂ ಹೆಚ್ಚಿನ ಹಣವನ್ನು ಪಡೆದಿರುವುದಾಗಿ ರೈತರ ಆರೋಪವಾಗಿದೆ. ತಿಂಗಳ ನಂತರ ರೈತರೊಬ್ಬರು ಗೋಣಿಕೊಪ್ಪ ಸಮೀಪದ ಕೈಕೇರಿಯ ಪೊನ್ನಿಮಾನಿ ಅಂಗಡಿಯಲ್ಲಿ ಜನರೇಟರ್ ಖರೀದಿಗೆ ಹೆಚ್ಚಿನ ಹಣ ಪಡೆದಿರುವುದಾಗಿ ರೈತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಅರಿಯಬಿಟ್ಟಿದ್ದರು. ಇದನ್ನು ಆಕ್ಷೇಪಿಸಿದ ಅಂಗಡಿ ಮಾಲೀಕರು ಇವರ ವಿರುದ್ಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಇನ್ನು ಮುಂದೆ ಈ ರೀತಿ ಮಾಡದಂತೆ ಲಿಖಿತರೂಪದಲ್ಲಿ ತಿಳಿಸಿದ್ದರು. ಪೊಲೀಸರು ಈ ಬಗ್ಗೆ ಉಭಯಕಡೆಯವರಿಗೂ ಸೂಚನೆ ನೀಡಿ ಕಳುಹಿಸಿದ್ದರು.

40ಕ್ಕೂ ಅಧಿಕ ರೈತರಿಗೆ ಇದೇ ಅಂಗಡಿಯಲ್ಲಿ ಜನರೇಟರ್ ಖರೀದಿಸಿದ ಸಂದರ್ಭ ಅಂಗಡಿ ಮಾಲೀಕರು ನಿಗದಿತ ದರಕ್ಕಿಂತಲೂ ಹೆಚ್ಚಿನ ಹಣ ಪಡೆದಿರುವ ಬಗ್ಗೆ ರೈತ ಸಂಘದ ಪದಾಧಿಕಾರಿಗಳಿಗೆ ದೂರನ್ನು ನೀಡಿ ರೈತರಿಂದ ಹೆಚ್ಚಾಗಿ ಪಡೆದ ಹಣವನ್ನು ವಾಪಾಸ್ಸು ಹಿಂದಿರುಗಿಸಿ ಕೊಡುವಂತೆ ಮನವಿ ಮಾಡಿದ್ದರು.

ರೈತರ ದೂರಿನ ಅರ್ಜಿಯನ್ನು ಪರಿಶೀಲಿಸಿದ ರೈತ ಸಂಘದ ಅಧ್ಯಕ್ಷ ಮನುಸೋಮಯ್ಯ, ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಸುಭಾಶ್ ಸುಬ್ಬಯ್ಯ ರೈತರು ಖರೀದಿಸಿದ ಜನರೇಟರ್‍ಗಳಿಗೆ ವಿವಿಧ ಭಾಗಗಳಿಂದ ದರಪಟ್ಟಿಯನ್ನು ಆಹ್ವಾನಿಸಿ ಜನರೇಟರ್‍ನ ನಿಖರತೆಯ ಬೆಲೆಯನ್ನು ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಕೈಕೇರಿಯ ಪೊನ್ನಿಮಾನಿ ಅಂಗಡಿ ಮಾಲೀಕರು ಜನರೇಟರ್‍ಗೆ ನಿಗದಿತ ದರಕ್ಕಿಂತಲೂ ಹೆಚ್ಚಿನ ಹಣವನ್ನು ರೈತರಿಂದ ಪಡೆದಿರುವ ಬಗ್ಗೆ ಮಾಹಿತಿ ಅರಿವಿಗೆ ಬಂದಿದೆ. ರೈತರಿಂದ ಹೆಚ್ಚಿನ ಹಣವನ್ನು ಪಡೆದಿರುವುದು ಸರಿಯಲ್ಲ ಎಂದು ಹಣ ವಾಪಾಸ್ಸು ನೀಡುವಂತೆ ತಿಳಿಸಿದ್ದರು. ಆದರೆ ಮಾಲೀಕರು ಈ ವಿಷಯದಲ್ಲಿ ನಿರಾಸಕ್ತಿ ವಹಿಸಿದ್ದರು. ಇದರಿಂದ ನೊಂದ ರೈತರು ಅಧ್ಯಕ್ಷರ ಸಮ್ಮುಖದಲ್ಲಿ ನ್ಯಾಯ ಪಡೆಯಲು ಅಂಗಡಿಯ ಮುಂದೆ ಪ್ರತಿಭಟನೆ ನಡೆಸಿದರು. ರೈತರಾದ ಕುಂಞಂಗಡ ನಟೇಶ್, ಪೋಡಮಾಡ ಸುಬ್ರಮಣಿ, ಪೋಡಮಾಡ ಮೋಹನ್, ಗಿರೀಶ್ ಮಾಚಯ್ಯ, ಅಡ್ಡಣಗಡ ರಘು,ತಪನ್ ತಿಮ್ಮಯ್ಯ,ಕಾಂಡೇರ ಅಯ್ಯಪ್ಪ ಸೇರಿದಂತೆ ಇನ್ನಿತರ ರೈತರು ಪ್ರತಿಭಟನೆಯಲ್ಲಿ ತಮ್ಮ ನೋವನ್ನು ತೋಡಿಕೊಂಡರು.

ಬಿ.ಶೆಟ್ಟಿಗೇರಿಯ ಕುತ್ತುನಾಡು ಸೊಸೈಟಿಯ ಉಪಾಧ್ಯಕ್ಷರಾದ ಉಮೇಶ್ ಕೇಚಮಯ್ಯ, ಟಿ.ಶೆಟ್ಟಿಗೇರಿ ಭಾಗದ ರೈತ ಸಂಘದ ಮುಖಂಡ ಅಪ್ಪಚಂಗಡ ಮೋಟಯ್ಯ ಮಾತನಾಡಿ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಪೊನ್ನಿಮಾನಿ ಸಂಸ್ಥೆಯ ಮಾಲೀಕರು ಸ್ಥಳದಲ್ಲಿ ಇರದ್ದರಿಂದ ಮುಂಜಾನೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದ ರೈತರು ಅಂಗಡಿ ಮುಂದೆಯೇ ಊಟ ತರಿಸಿ ಪ್ರತಿಭಟನೆ ಮುಂದುವರೆಸಿದರು.

ಸ್ಥಳಕ್ಕೆ ಆಗಮಿಸಿದ ಗೋಣಿಕೊಪ್ಪ ವೃತ್ತ ನಿರೀಕ್ಷ ರಾಮರೆಡ್ಡಿ ಅಂಗಡಿ ಮಾಲೀಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಗಂಭೀರ ಸ್ವರೂಪವಾಗುತ್ತಿದ್ದು ಆದಷ್ಟು ಬೇಗನೇ ಆಗಮಿಸಿ ಬಗೆ ಹರಿಸಿಕೊಳ್ಳುವಂತೆ ತಿಳಿಸಿದರು. ಪ್ರತಿಭಟನೆಯಲ್ಲಿ ರೈತ ಸಮಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ತಾಲೂಕು ಸಂಚಾಲಕ ಬಾಚಮಾಡ ಭವಿಕಮಾರ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬಕಾರ್ಯಪ್ಪ, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ರೈತಮುಖಂಡರುಗಳಾದ ಗಾಡಂಗಡ ಉತ್ತಯ್ಯ, ಕೋದೇಂಗಡ ಸುರೇಶ್, ಕೋದೇಂಗಡ ಬೆನ್ಜ್‍ನ್, ಪೆಮ್ಮಂಡ ಉಮೇಶ್, ಚೊಟ್ಟೆಕಾಳಪಂಡ ಮನು, ಗಾಣಂಗಡ ಉಮೇಶ್, ತೀತರಮಾಡ ರಾಜ, ಚೆಪ್ಪುಡೀರ ರೋಶನ್, ಸೇರಿದಂತೆ ಇನ್ನಿತರರು ಹಾಜರಿದ್ದರು.

ರೈತರಿಗೆ ಆದ ಅನ್ಯಾಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ವೀರಾಜಪೇಟೆ ತಾಲೂಕಿನ ಡಿವೈಎಸ್ಪಿ ಜಯಕುಮಾರ್ ಆಗಮಿಸಿ ರೈತ ಮುಖಂಡರೊಂದಿಗೆ ಪ್ರತಿಭಟನಾಕಾರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಈ ಸಂದರ್ಭ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಮಧ್ಯಸ್ಥಿಕೆ ವಹಿಸಿ ನಗರದಲ್ಲಿರುವ ವ್ರತ್ತ ನಿರೀಕ್ಷಕರ ಕಚೇರಿಗೆ ಪೆÇನ್ನಿಮಾನಿ ಇಂಡಸ್ಟ್ರೀಸ್ ಮಾಲೀಕರನ್ನು ಕರೆಸಿ ಮಾತುಕತೆ ನಡೆಸುವ ವಿಷಯ ಪ್ರಸ್ತಾಪ ಮಾಡುವುದಾಗಿ ತಿಳಿಸಿದರು.

ಇವರ ಮಾತಿಗೆ ಮನ್ನಣೆ ವ್ಯಕ್ತಪಡಿಸಿದ ಹೋರಾಟಗಾರರು ಸರ್ಕಲ್ ಕಚೇರಿಗೆ ತೆರಳಿ ಡಿವೈಎಸ್ಪಿ ಜಯಕುಮಾರ್ ಸಮ್ಮುಖದಲ್ಲಿ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಪ್ರ.ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು. ಪೆÇನ್ನಿಮಾನಿ ಇಂಡಸ್ಟ್ರೀಸ್ ಮಾಲೀಕರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ತಾನು ರೈತರಿಗೆ ಮೋಸ ಮಾಡುವ ಉದ್ದೇಶ ಹೊಂದಿಲ್ಲ. ಎಲ್ಲವನ್ನು ಜಿಎಸ್‍ಟಿಯ ಬಿಲ್ ಪಾವತಿಸಿದ್ದೇನೆ. ಕೊಯಮತ್ತೂರುನಿಂದ ಜನರೇಟರ್ ತಂದು ಮಾರಾಟ ಮಾಡಿದ್ದೇನೆ. ಯಾರಿಗೂ ಬಿಲ್ ನೀಡದೆ ವ್ಯವಹಾರ ನಡೆಸಿಲ್ಲ. ಇದೀಗ ಬಿಲ್ ಅಧಿಕವಾಗಿ ಹಣ ಪಡೆದಿರುವಿರಿ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಸಮಜಾಯಿಷಿಕೆ ನೀಡಿದರು.

ಎಲ್ಲ ಗ್ರಾಹಕರಿಗೆ ಜಿ ಎಸ್ ಟಿ ಬಿಲ್ ನೀಡುವಂತೆ ಡಿವೈಎಸ್ಪಿ ಜಯಕುಮಾರ್ ನಿರ್ದೇಶನ ನೀಡಿದರು. ಅಗತ್ಯ ಬಿದ್ದಲ್ಲಿ ನೊಂದ ರೈತರು ಗ್ರಾಹಕರ ವೇದಿಕೆಗೆ ತೆರಳಿ ನ್ಯಾಯ ಪಡೆಯಲು ಅವಕಾಶವಿದೆ ಸಲಹೆ ನೀಡಿದರು.

ಈ ಸಂದರ್ಭ ವೃತ್ತನಿರೀಕ್ಷಕ ರಾಮರೆಡ್ಡಿ, ಪೆÇನ್ನಂಪೇಟೆ ಠಾಣಾಧಿಕಾರಿ ಕುಮಾರ್, ಶ್ರೀಮಂಗಲ ಠಾಣಾಧಿಕಾರಿ ಮಂಚಯ್ಯ, ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಮತ್ತಿತರರು ಹಾಜರಿದ್ದರು.