ಮಡಿಕೇರಿ ಅ. 24 : ರಾಷ್ಟ್ರೀಯ ಕರಾಟೆ ಅಸೋಶಿಯೇಷನ್ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ ಆಯ್ಕೆಯಾಗಿದ್ದಾರೆ.

ಕೇರಳ ಮತ್ತು ಹರ್ಯಾಣ ಹೈ ಕೋರ್ಟ್ ಆದೇಶದಂತೆ, ಭಾರತ ಸರ್ಕಾರ ಕ್ರೀಡಾ ಮಂತ್ರಾಲಯ ಮತ್ತು ಇಂಡಿಯನ್ ಒಲಿಪಿಂಕ್ ಅಸೋಶಿ ಯೇಷನ್ ಜಂಟಿ ಆಶ್ರಯದಲ್ಲಿ ಅಸ್ಸಾಂ ಹೈ ಕೋರ್ಟ್ ನಿವೃತ್ತ ನ್ಯಾಯದೀಶ ಬಿ.ಪಿ. ಬೋರ್ಕೋಟಗಿ ಅವರ ಸಮ್ಮುಖದಲ್ಲಿ ಅಸ್ಸಾಂ ರಾಜ್ಯದ ಗೌಹಟಿಯಲ್ಲಿ ನಡೆದ ಕರಾಟೆ ರಾಷ್ಟ್ರೀಯ ಮಂಡಳಿಯ ಹಿರಿಯ ಉಪಾಧ್ಯಕ್ಷರಾಗಿ ಕರಾಟೆ ಪಟು ಅರುಣ್ ಮಾಚಯ್ಯ ಅವರನ್ನು ಆಯ್ಕೆ ಮಾಡಲಾಯಿತು.

1977 ರಲ್ಲಿ ಪ್ರಥಮ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಅರುಣ್ ಮಾಚಯ್ಯ ಅವರು ಕರಾಟೆಯಲ್ಲಿ ಉನ್ನತ ತರಬೇತಿಯನ್ನು ಸಿಂಗಾಪುರ್‍ನಲ್ಲಿ ಮುಗಿಸಿದ್ದರು. ನಂತರದ ವರ್ಷಗಳಲ್ಲಿ ಇಂಡೋ ನೇಷ್ಯಾ ಮಲೇಷಿಯಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ಮೆಕ್ಸಿಕೋ, ನೇಪಾಳ ಹೀಗೆ ಹಲವು ವಿಶ್ವ ಮತ್ತು ಏಶಿಯನ್ ಕರಾಟೆ ಸ್ಪರ್ಧೆ ಯಲ್ಲಿ ಭಾಗವಹಿಸಿ 1989ರಲ್ಲಿ 1993ರಲ್ಲಿ ಹೆವಿವೈಟ್ ವಿಭಾಗದಲ್ಲಿ ಪದಕ ಗಳಿಸಿದ್ದಾರೆ. 1994ರಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಕ್ರೀಡಾಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಸ್ತುತ ಇವರು ವಿಶ್ವಕರಾಟೆ ಫೆಡರೇಷನ್ (ಡಬ್ಲ್ಯುಕೆಎಫ್) 7ನೇ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿದ್ದು, ಅಂತ ರಾಷ್ಟ್ರೀಯ ತೀರ್ಪುಗಾರರಾಗಿದ್ದಾರೆ.